ರಾಜ್ಯ
ನಾಳೆಯಿಂದ ಧಾರವಾಡ ಜಿಲ್ಲೆ ಕೂಡ ಅನ್ ಲಾಕ್ !!!

ಬೆಂಗಳೂರು : ಧಾರವಾಡ ಜಿಲ್ಲೆಯನ್ನು ಸಹ ಸೋಮವಾರದಿಂದ (ಜೂ.21) ಅನ್ ಲಾಕ್ ಮಾಡಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ಶನಿವಾರ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ ಜಗದೀಶ್ ಶೆಟ್ಟರ್ ಅವರು, ನನ್ನ ಶಿಫಾರಸ್ಸಿನ ಮೇರೆಗೆ ಮಾಹಿತಿಯನ್ನು ಮರುಪರಿಶೀಲಿಸಿ, ಅನ್ ಲಾಕ್ ಮಾಡಲು ಸರ್ಕಾರ ಆದೇಶಿಸಿದ್ದು, ನಾಳೆ ಮುಂಜಾನೆ 6ರಿಂದ ಒಂದನೇ ವರ್ಗದ ಜಿಲ್ಲೆಗಳ ಮಾರ್ಗಸೂಚಿ ಅನುಸಾರ ಧಾರವಾಡ ಜಿಲ್ಲೆಯೂ ಅನ್ ಲಾಕ್ ಆಗಲಿದೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.