ಅಂತಾರಾಷ್ಟ್ರೀಯ
ನೇಪಾಳ ಪ್ರಧಾನಿ ಒಲಿ ವಿವಾದಾತ್ಮಕ ಹೇಳಿಕೆ : ಯೋಗದ ಮೂಲ ಭಾರತವಲ್ಲ

ನೇಪಾಳ: 7ನೇ ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ನೇಪಾಳ ಪ್ರಧಾನಿ ಕೆ.ಪಿ ಒಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಶ್ವಕ್ಕೆ ಯೋಗವನ್ನು ಕೊಡುಗೆಯಾಗಿ ನೀಡಿದ್ದು ಭಾರತವಲ್ಲ ನೇಪಾಳ ಎಂದು ಹೇಳಿದ್ದಾರೆ. ಯೋಗಾಭ್ಯಾಸ ಮಾಡುತ್ತಿದ್ದ ವೇಳೆ ಭಾರತವೇ ಇರಲಿಲ್ಲ. ಮಹಾರಾಜರುಗಳ ರಾಜ್ಯವಿತ್ತೇ ಹೊರತು, ಭಾರತ ಅಸ್ಥಿತ್ವದಲ್ಲೇ ಇರಲಿಲ್ಲ. ಅನಾದಿ ಕಾಲದಿಂದಲೂ ನೇಪಾಳದಲ್ಲಿ ಯೋಗಾಭ್ಯಾಸ ಮಾಡಲಾಗುತ್ತಿದೆ. ಯೋಗದ ಮೂಲ ನೇಪಾಳ. ನಾವು ಯೋಗವನ್ನು ನಮ್ಮ ಕೊಡುಗೆ ಎಂದು ಹೇಳಲಿಲ್ಲ. ಭಾರತ ಯೋಗ ಗುರು ಎಂದು ಎಲ್ಲಡೆ ಹೆಸರು ಪಡೆದುಕೊಂಡಿದೆ ಎಂದು ಒಲಿ ಶರ್ಮಾ ಹೇಳಿದ್ದಾರೆ.
ಇದೀಗ ಒಲಿ ಶರ್ಮಾ ಹೇಳಿಕೆ ಭಾರತೀಯರ ಹಾಗೂ ನೇಪಾಳಿಗರ ಆಕ್ರೋಶಕ್ಕೂ ಕಾರಣವಾಗಿದೆ.
ಈ ಹಿಂದೆ ಶ್ರೀರಾಮನ ಜನ್ಮಸ್ಥಾನ ಆಯೋಧ್ಯೆ ಅಲ್ಲ ನೇಪಾಳದಲ್ಲಿ ಎಂದು ಕೆಪಿ ಒಲಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿತ್ತು. ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.