
ಬಾರಕೂರು : 13ನೇ ಹನೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಡೀಮಠ ಪರಿಸರ ದಿಂದ ಸ್ಥಳೀಯ ಪಂಚಾಯತ್ ಅನುಮತಿ ಇಲ್ಲದೆ 3km ಗ್ರಾಮ ಪಂಚಾಯತ್ ರಸ್ತೆ ಒಳಗೊಂಡಂತೆ ಒಟ್ಟು 5ಕಿಮೀ ರಸ್ತೆ ಬದಿಯಲ್ಲಿಬ್ರಹತ್ 4 ಜೆಸಿಬಿ ಬಳಸಿ ಖಾಸಗಿ ಸಿಮೆಂಟ್ ಮಿಕ್ಸಿಂಗ್ ಗೆ ರಸ್ತೆ ಬದಿಯಲ್ಲಿ ಪೈಪ್ ಲೈನ್ ಅಳವಡಿಸಲು ಪೊಲೀಸ್ ಭದ್ರತೆಯಲ್ಲಿ ದಿನಾಂಕ 18/06/2021ರಂದು ಬಾರಕೂರು ರಂಗನಕೆರೆ PWD ಕಾಂಟ್ರಾಕ್ಟ್ ರ್ ಪ್ರವೀಣ್ ಆಚಾರ್ಯ ಪ್ರಯತ್ನ ಮಾಡಿದ್ದಾರೆಂದು ತಿಳಿದು ಬಂದಿದೆ.
ಸ್ಥಳೀಯ ಗ್ರಾಮ ನಿವಾಸಿಗಳು ಆಕ್ಷೇಪ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಕೆಲಸ ಸ್ಥಗಿತಗೊಂಡು ಮಾತುಕತೆ ಕುಂದಾಪುರ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನೇತೃತ್ವದಲ್ಲಿ ನಡೆಯುವುದಾಗಿ ಶಾಸಕರ ಅನುಮತಿ ಮೇರೆಗೆ ಇವತ್ತು ದಿನಾಂಕ 21/06/2021ರಂದು ಬೆಳಿಗ್ಗೆ ಬಾರಕೂರು ಬಂಡೀಮಠದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾನ್ಯ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಖುದ್ದು ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು ಹಾಗೂ ಮಾತುಕತೆ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಹಾಗೂ PWD ಗುತ್ತಿಗೆದಾರ ಪ್ರವೀಣ್ ಆಚಾರ್ಯ ರಂಗನಕೆರೆ, ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಜನಪ್ರತಿನಿದಿಗಳು, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದು ಮಾತುಕತೆ ನಡೆಯಿತು.
ಹನೇ ಹಳ್ಳಿ ಗ್ರಾಮದ ಸರ್ವೇ ನಂಬರ್ 60/10 ರ 0.07ಸೆಂಟ್ಸ್ ಜಮೀನಿನಿಂದ 5km ದೂರದ ರಂಗನಕೆರೆಗೆ ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡಲು ಅನುಮತಿ ನೀಡಿದಲ್ಲಿ ಸ್ಥಳೀಯ ಜನ ಉಪ್ಪು ನೀರು ಕುಡಿಯ ಬೇಕಾಗುತ್ತದೆ ಬಾವಿಯ ಹತ್ತಿರದಲ್ಲಿ ಸೀತಾನದಿ ಹರಿಯುತ್ತಿದ್ದು ಮಳೆಗಾಲ ಹೊರತು ಪಡಿಸಿ ಈ ನದಿ ನೀರು ಕಡು ಉಪ್ಪು ಆಗಿದ್ದು ಈ ಬಾವಿಯ ಸುತ್ತಮುತ್ತ ಇರುವ ಬಾವಿ 15-20 ಅಡಿ ಆಳದ್ದಾಗಿರುತ್ತದೆ ಇನ್ನೂ ಆಳಕ್ಕೆ ಹೋದಲ್ಲಿ ಈ ಪರಿಸರದಲ್ಲಿ ಉಪ್ಪು ನೀರು ಒಸರುತ್ತದೆ, ಆದರೆ ಪ್ರವೀಣ್ ಆಚಾರ್ಯ ರಂಗನಕೆರೆ ಇವರು 35ಅಡಿ ಆಳದ 22ಅಡಿ ಅಗಲದ ವಿಶಾಲ ಬಾವಿ ತೋಡಿದ್ದು ಉಚಿತ 5HP ಕೃಷಿ ಪಂಪ್ ಅಳವಡಿಸಿದ್ದಾರೆ ಇಲ್ಲಿನ ಹೆಚ್ಚಿನ ಬಾವಿಗಳಿಗೆ ಅಳವಡಿಸಿರೋ ಕೃಷಿ ಪಂಪ್ 3HP ಆಗಿರುತ್ತದೆ.
ಅಲ್ಲದೇ ಹತ್ತಿರವೆ ಇರುವ ಇತಿಹಾಸ ಪ್ರಸಿದ್ದ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಹಾಗೂ ತೀರ್ಥ ಬಾವಿ, ಹಾಗೂ ಇತಿಹಾಸ ಪ್ರಸಿದ್ದ ಕಾರಣಿಕ ನಾಗಸಾನಿಧ್ಯ ನಾಗರಡಿ ನಾಗದೇವತಾ ಸಾನಿಧ್ಯದ ತೀರ್ಥ ಬಾವಿ ನೀರು ಸಹ ಕಳೆದ ವರ್ಷ ಉಪ್ಪು ನೀರು ವಸರಿದ್ದು ದೇವರ ತಲೆಗೆ ಅಭಿಷೇಕಕ್ಕೆ ಉಪ್ಪು ನೀರು ಎರೆಯುವುದೇ…?ನಾವು ಒಬ್ಬ ವ್ಯಕ್ತಿಯ ವಯಕ್ತಿಕ ಹಿತಾಸಕ್ತಿಗೆ ಹಾಗೂ ಸ್ವಲಾಭಕ್ಕೆ ನೀರು ಹೋಗಲು ಅವಕಾಶ ನೀಡಿದಲ್ಲಿ ಗ್ರಾಮದ ಜನರ ಕುಡಿಯುವ ನೀರಿಗೆ ಕುತ್ತು ಬರಲಿದೆ ಅಲ್ಲದೇ ಹಿಂದೆ 2019ರಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಕ್ಕೆ ಸ್ಥಳೀಯ ನಿವಾಸಿ ಬ್ರಾಹ್ಮಣ ಪೂಜಾ ಅರ್ಚಕ ರಾಜೇಶ್ ಅಡಿಗರಮೇಲೆ ಪ್ರವೀಣ್ ಆಚಾರ್ಯ ಹಾಗೂ ಇತರರು ಹಲ್ಲೆ ನಡೆಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯಂತೆ, ಪದೇ ಪದೇ ಪ್ರವೀಣ್ ಆಚಾರ್ಯರು ಪಂಚಾಯತ್ ಅನುಮತಿ ಪಡೆಯದೇ ಪೈಪ್ ಲೈನ್ ಅಳವಡಿಸಲು ಪ್ರಯತ್ನ ಪಟ್ಟ ಹಿನ್ನಲೆಯಲ್ಲಿ ಆದ ವಾದ -ಪ್ರತಿವಾದದ ಹಿನ್ನಲೆಯಲ್ಲಿ ಕಳೆದ 2ವರ್ಷದಲ್ಲಿ 3ಕ್ರಿಮಿನಲ್ ಪ್ರಕರಣ ದಾಖಲಾಗಿದೆಯಂತೆ.
ಈಗ ಪುನಃ PRED ಇಂಜಿನಿಯರ್ ನಾಗಶಯನ ಪ್ರವೀಣ್ ಆಚಾರ್ಯರೊಂದಿಗೆ ಒಳ ಒಪ್ಪಂದ ಮಾಡಿ ಕೊಂಡು ಅಕ್ರಮ ಖಾಸಗಿ ಕಾಮಗಾರಿಗೆ ತನ್ನ ಕಾರ್ಯವ್ಯಾಪ್ತಿ ಮೀರಿ ಸ್ಥಳೀಯ 3km ಗ್ರಾಮ ಪಂಚಾಯತ್ ರಸ್ತೆ ಬದಿ ಮೂರು ಬ್ರಹತ್ ಜೆಸಿಬಿ ಬಳಸಿ 8ಅಡಿ ಆಳಕ್ಕೆ ಪೈಪ್ ಲೈನ್ ಅಳವಡಿಸಲು ಪ್ರಯತ್ನ ಮಾಡಿದ್ದು ಅದಕ್ಕೆ ಕಾನೂನು ಬಾಹಿರವಾಗಿ EE ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಆದೇಶ ಪತ್ರ ಹಾಗೂ PRED ಇಂಜಿನಿಯರ್ ನಾಗಶಯನ ಉಪಸ್ಥಿತಿಯಲ್ಲಿ ಬ್ರಹ್ಮವರ ಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ 18/06/2021ರಂದು ಪಂಚಾಯತ್ ಪರವಾನಗೆ ಪಡೆಯದೇ ಅಕ್ರಮ ಕಾಮಗಾರಿಗೆ ಪ್ರಯತ್ನ ಪಟ್ಟಿದ್ದಾರೆ ಅಲ್ಲದೇ ಪ್ರವೀಣ್ ಆಚಾರ್ಯ ರಂಗನಕೆರೆ ಅವ್ರಿಗೆ ಕುಡಿಯುವ ನೀರು ಹಾಗೂ ಕೃಷಿ ಬಳಕೆಗೆ ಅವರ ತಂದೆ ವಾಸುದೇವ ಆಚಾರ್ಯರ ಹೆಸರಲ್ಲಿ 2014ರಿಂದ RR no 40695 LT4, 5HP, ಯ ವಿಶಾಲವಾದ ಕ್ರಷಿ ಪಂಪ್ ಸೆಟ್ಗೆ ಉಚಿತ ವಿದ್ಯುತ್ ಸೌಲಭ್ಯವಿದೆ… ಈಗ ಬಂಡೀಮಠದಿಂದ ರಂಗನಕೆರೆಗೆ ನೀರು ತೆಗೆದು ಕೊಂಡು ಹೋಗುವುದು ತನ್ನ ಖಾಸಗಿ ಉದ್ಯಮ ಸಿಮೆಂಟ್ ಮಿಕ್ಸಿಂಗ್ ಗೆ ಹಾಗೂ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಎಂದು ಸ್ಥಳೀಯರು ತಮ್ಮ ಸಮಸ್ಯೆ ಹಾಗೂ ವಾಸ್ತವ ವಿಷಯ ಮಾನ್ಯ ಶಾಸಕರ ಗಮನಕ್ಕೆ ತಂದರು.
ನಂತರ ಸ್ಥಳೀಯರು ಯಾವುದೇ ಕಾರಣಕ್ಕೂ ಇಲ್ಲಿನ ನೀರು ಹೊರಗೆ ಹೋಗಲು ಅವಕಾಶ ನೀಡುವುದಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು ಅದಕ್ಕೆ ಶಾಸಕರು ಪಂಚಾಯತ್ ಅಭಿಪ್ರಾಯ ತಿಳಿಸುವಂತೆ ಸ್ಥಳೀಯ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಬಳಿ ಕೇಳಿದರು, ಅಧ್ಯಕ್ಷರು ಸಹ ಸ್ಥಳೀಯ ಗ್ರಾಮದ ನಿವಾಸಿಗಳ ಹಿತಾಸಕ್ತಿ ವಿರುದ್ಧ ಹೋಗಲು ಆಗದು ಈಗಾಗಲೇ ನಮ್ಮ ಗ್ರಾಮದಲ್ಲೇ ನೀರಿನ ಸಮಸ್ಯೆ ಇದೆ. ಇನ್ನೊಂದು ಗ್ರಾಮದ ಖಾಸಗಿ ವ್ಯಕ್ತಿಗೆ ನೀರು ಸರಬರಾಜು ಮಾಡಲು ಸ್ಥಳೀಯ ಪಂಚಾಯತ್ ಸಿದ್ದವಿಲ್ಲ. ಅಲ್ಲದೇ ಈ ಪೈಪ್ ಲೈನ್ ಕಾಮಗಾರಿಗೆ 2019-ಈವರೆಗೆ ನಾವು ಪರವಾನಗೆ ನೀಡಿಲ್ಲ, ಇನ್ನು ಮುಂದೆ ಸಹ ನೀಡುವುದಿಲ್ಲ ಎಂದು ಪಂಚಾಯತ್ ನಿರ್ಣಯ ಮಾಡಿದೆ ಎಂದರು… ಅದಕ್ಕೆ ಉತ್ತರವಾಗಿ ಮಾನ್ಯ ಶಾಸಕರು ಪ್ರವೀಣ್ ಆಚಾರ್ಯರನ್ನು ಉದ್ದೇಶಿಸಿ ಇನ್ನು ಇಲ್ಲಿಂದ ನೀರು ತೆಗೆದು ಕೊಂಡು ಹೋಗಲು ಆಗದು ಎಂದು ನುಡಿದರು. ಸ್ಥಳೀಯರಿಗೆ ನ್ಯಾಯ ಒದಗಿಸುವುದಕ್ಕಾಗಿ ಶಾಸಕರಿಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.