ರಾಜ್ಯ

ಶಿಶುಪಾಲನಾ ರಜೆ: ರಾಜ್ಯ ಸರಕಾರದಿಂದ ಐತಿಹಾಸಿಕ ಆದೇಶ

ಬೆಂಗಳೂರು – ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸರಕಾರಿ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಘೋಷಿಸಲಾಗಿದ್ದು, ಆ ಕುರಿತು ಆದೇಶ ಹೊರಡಿಸಲಾಗಿದೆ.

ಕಳೆದ ಆಯವ್ಯಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಕುರಿತು ಪ್ರಕಟಿಸಿದ್ದರು. ಇದೀಗ ಅದರ ಆದೇಶ ಹೊರಬಿದ್ದಿದೆ.

ಈ ಮೊದಲು ಬುದ್ಧಿಮಾಂದ್ಯ ಅಥವಾ ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರ ಮಹಿಳಾ ನೌಕರರಿಗೆ ವೈದ್ಯಕೀಯ ಮಂಡಳಿಯ ಪ್ರಮಾಣ ಪತ್ರದ ಆಧಾರದ ಮೇಲೆ ಕೆಲವು ಪತ್ತಿಗಳು ಒಂದು ವರ್ಷದಲ್ಲಿ ಮೂರು ಕಂತುಗಳಿಗೆ ಮೀರದಂತೆ ಹಾಗೂ 15 ದಿನಗಳಿಗೆ ಕಡಿಮೆ ಇಲ್ಲದಂತೆ ಇಡೀ ಸೇವಾವಧಿಯಲ್ಲಿ ಎರಡು ವರ್ಷಗಳ ಅವರಿಗೆ ಅಂದರೆ 70 ದಿನಗಳ ಶಿಶುಪಾಲ ರಜೆಯನ್ನು ನೀಡಲಾಗುತ್ತಿತ್ತು.ಇದೀಗ ಎಲ್ಲ ಮಹಿಳಾ ನೌಕರರಿಗೂ ರಜೆ ನೀಡಲು ಆದೇಶಿಸಲಾಗಿದೆ.

ಪ್ರಸಕ್ತ ಸರ್ಕಾರವು 2021-22ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-37ರಲ್ಲಿ ರಾಜ್ಯ ಸರ್ಕಾರದ ಮಹಿಳಾ ನೌಕರರಿಗೆ ಜಾಲ್ತಿಯಲ್ಲಿರುವ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾವಧಿಯಲ್ಲಿ ಆರು ತಿಂಗಳವರೆಗೆ ಅಂದರೆ 180 ದಿನಗಳ ಶಿಶುಪಾಲನ ರಜೆಯನ್ನು ಘೋಷಿಸಿದ್ದು, ಈ ಕುರಿತಂತೆ ರಾಜ್ಯ ಸರ್ಕಾರವು ಪರಿಶೀಲಿಸಿ ಈ ಕೆಳಕಂಡಂತ ಆದೇಶಿಸಿದೆ. (ಸರ್ಕಾರಿ ಆದೇಶ ಸಂಖ್ಯೆ: ಆಇ 4(2) MaM 2021 ಬೆಂಗಳೂರು, ದಿನಾಂಕ: 21.06.2021)
ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಈ ಕೆಳಕಂಡ ಷರತ್ತುಗಳ ಮೇರೆಗೆ ಇಡೀ ಸೇವಾವಧಿಯಲ್ಲಿ ಗರಿಷ್ಟ ಆರು ತಿಂಗಳವರೆಗೆ ಅಂದರೆ 180 ದಿಗಳ “ಶಿಶುಪಾಲ ರಜೆಯನ್ನು ರಜೆಯನ್ನು ಮಂಜೂರು ಮಾಡುವ ಸುಮ ಪ್ರಾಧಿಕಾರವು ಮಂಜೂರು ಮಾಡತಕ್ಕದ್ದು.

1. ಮಹಿಳಾ ಸರ್ಕಾರಿ ನೌಕರಳು ಹೊಂದಿರುವ ಮಕ್ಕಳ ಸಂಖ್ಯೆಯನ್ನು ಪರಿಗಣಿಸದೆ ಅತ್ಯಂತ ಕಿರಿಯ ಮಗುವು 18 ವರ್ಷ ತಲುಪುವವರೆಗಿನ ಅವಧಿಗೆ ಮಾತ್ರ ಈ ರಜೆಯ ಸೌಲಭ್ಯಕ್ಕೆ ಅರ್ಹರಾಗತಕ್ಕದ್ದು.

2. ಈ ರಜೆಯ ಅವಧಿಯಲ್ಲಿ ಅವಳು ರಜೆಯ ಮೇಲೆ ಹೋಗುವ ನಿಕಟ ಪೂರ್ವದಲ್ಲಿ ಪಡೆಯಲರ್ಹವಿರುವ ಸಂಪೂರ್ಣ ಬೇಕನಕ್ಕೆ ಸಮನಾದ ರಜೆ ಸಂಬಳಕ್ಕೆ ಅರ್ಹರಾಗತಕ್ಕದ್ದು.

3. ಪ್ರತಿ ಬಾರಿಯ ಈ ರಜೆ ಮಂಜೂರಾತಿಯು 15 ದಿನಗಳಿಗಿಂತ ಕಡಿಮೆ ಇರಬಾರದು.

4. ಮಹಿಳಾ ಸರ್ಕಾರಿ ನೌಕರಳು ಈ ರಜೆಯನ್ನು ಸಾಂದರ್ಭಿಕ ರಜೆಯ ಹೊರತಾಗಿ, ನಿಯಮಾನುಸಾರ ಪಡೆಯಲರ್ಹವಿರುವ ಅಸಾಧಾರಣ ರಜೆಯೂ ಒಳಗೊಂಡಂತೆ ಇತರೆ ರಜೆಯೊಂದಿಗೆ ಸಂಯೋಜಿಸಿ ಪಡೆಯಬಹುದು.

5. ಈ ರಜೆಯನ್ನು ಯಾವುದೇ ರಜೆ ಲೆಕ್ಕದಿಂದ ಕಳೆಯತಕ್ಕದ್ದಲ್ಲ. ಉಪಯೋಗಿಸಿಕೊಳ್ಳದ ಈ ಸೌಲಭ್ಯದ ಸಂಬಂಧದಲ್ಲಿನ ರಜೆಯನ್ನು ಗಳಿಕೆ ರಜೆ ಲೆಕ್ಕಕ್ಕೆ ಜನಗೊಳಿಸಲು ನಗದೀಕರಿಸಲು ಅವಕಾಶವಿರುವುದಿಲ್ಲ.

6. ಬುದ್ಧಿಮಾಂದ್ಯ /ಅಂಗವಿಕಲ ಮಕ್ಕಳನ್ನು ಹೊಂದಿರುವ ಸರ್ಕಾರಿ ಮಹಿಳಾ ನೌಕರರಿಗೆ ಮಂಜೂರು ಮಾಡಿರುವ 730 ದಿನಗಳ ಶಿಶುಪಾಲನಾ ರಜೆ ಸೌಲಭ್ಯಕ್ಕೆ ಅರ್ಹರಾದ ಯಾವುದೇ ನೌಕರಳು ಆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು, ಅದರೊಂದಿಗೆ ಈ ಯೋಜನೆಯಡಿಯಲ್ಲಿನ ಸೌಲಭ್ಯಕ್ಕೂ ಅರ್ಹರಾಗತಕ್ಕದ್ದಲ್ಲ.

7. ಶಿಶುಪಾಲನಾ ರಜೆಗಾಗಿ ಯಾವುದೇ ಪೂರಕ ದಾಖಲೆಗಳನ್ನು ಪಡೆಯುವ ಅವಶ್ಯಕತೆಯಿರುವುದಿಲ್ಲ. ಸೇವಾ ಪುಸ್ತಕದಲ್ಲಿ ನಮೂದಿಸಿರುವ ಮಕ್ಕಳ ವಿವರಗಳ ಆಧಾರದ ಮೇಲೆ ಮಂಜೂರು ಮಾಡತಕ್ಕದ್ದು.

8. ಈ ಪೂರ್ವದಲ್ಲಿ ಮಂಗಜೂರಾಗಿರುವ ಯಾವುದೇ ಬಗೆಯ ರಜೆಯನ್ನು ಶಿಶುಪಾಲನಾ ರಜೆಯಾಗಿ ಪರಿವರ್ತಿಸತಕ್ಕದ್ದಲ್ಲ. ಈ ಆದೇಶದಡಿಯಲ್ಲಿನ ಸೌಲಭ್ಯವು ಆದೇಶವನ್ನು ಹೊರಡಿಸಿದ ದಿನಾಂಕದಿಂದ ಜಾರಿಗೊಳ್ಳತಕ್ಕದ್ದು.

9. ಈ ರಜೆಯನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರವು ಶಿಶುಪಾಲನಾ ರಜೆಯ ಮಂಜೂರಾತಿಯನ್ನು ಸೇವಾ ಪುಸ್ತಕದಲ್ಲಿ ದಾಖಲು ಮಾಡುವುದು ಮತ್ತು ನಮೂನೆಯಲ್ಲಿ ಲೆಕ್ಕವಿಡಬೇಕು. (ವಿಶೇಷ ಮಕ್ಕಳ ಶಿಶುಪಾಲನಾ ರಜೆಯ ಲೆಕ್ಕವಿಡುವ ಪ್ರಪತ್ರದ ಮಾದರಿಯಲ್ಲಿ)
ಈ ಬಗ್ಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳಿಗೆ ಪ್ರತ್ಯೇಕವಾಗಿ ಸೂಕ್ತ ತಿದ್ದುಪಡಿ ತರುವುದು.

Related Articles

Leave a Reply

Your email address will not be published. Required fields are marked *

Back to top button
error: Content is protected !!