ರಾಷ್ಟ್ರೀಯ

ಲಸಿಕೆ ಹಾಕಿಸಿಕೊಂಡವರಿಗೆ ಶೇ.10 ರಷ್ಟು ಡಿಸ್ಕೌಂಟ್​: ಇಂಡಿಗೋ ವಿಮಾನ ಸಂಸ್ಥೆ ಘೋಷಣೆ

ಜೂನ್ 23 ರಿಂದ ಇಂಡಿಗೋ ವಿಮಾನ ಸಂಸ್ಥೆ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ಶೇ.10 ರಷ್ಟು ರಿಯಾಯಿತಿ ನೀಡುತ್ತೇವೆ ಎಂದು ಘೋಷಿಸಿದೆ.

ಬುಕ್ ಮಾಡಿದ ಟಿಕೆಟ್​ನ ಮೂಲ ಬೆಲೆಯ ಆಧಾರದ ಮೇಲೆ ರಿಯಾಯಿತಿ​ ನೀಡಲಿದ್ದು, ಸೀಮಿತ ಇನ್ವೆಂಟರಿ ಲಭ್ಯವಿದೆ ಎಂದು ಇಂಡಿಗೋ ಏರ್​ಲೈನ್ಸ್ ಹೇಳಿಕೆ ನೀಡಿದೆ. ಹಾಗೂ ಲಸಿಕೆ ಹಾಕಿಸಿಕೊಂಡ 18 ವರ್ಷ ಮೇಲ್ಪಟ್ಟ ಭಾರತೀಯ ಪ್ರಯಾಣಿಕರಿಗೆ ಮಾತ್ರ ಈ ಆಫರ್ ಅನ್ವಯಿಸಲಿದ್ದು, ಭಾರತದಲ್ಲಿ ಟಿಕೆಟ್ ಬುಕ್ ಮಾಡಿದವರು ಕನಿಷ್ಟ ಒಂದು ಡೋಸ್​ ಲಸಿಕೆ ಪಡೆದಿರಬೇಕು ಎಂದು ತಿಳಿಸಲಾಗಿದೆ. ಟಿಕೆಟ್ ಬುಕ್ಕಿಂಗ್ ಮಾಡುವಾಗ ಈ ವಿಶೇಷ ರಿಯಾಯಿತಿ ಪಡೆದವರು ಏರ್ ಪೋರ್ಟ್ ಚೆಕ್-ಇನ್ ವೇಳೆ ಕೋವಿಡ್-19 ಪ್ರಮಾಣಪತ್ರವನ್ನು ಸಲ್ಲಿಸಬೇಕು, ಇಲ್ಲವಾದರೆ ಆರೋಗ್ಯಸೇತು ಆಪ್​ನಲ್ಲಿ ತಮ್ಮ ಲಸಿಕೆ ಬಗೆಗಿನ ಮಾಹಿತಿಯನ್ನು ತೋರಿಸಬಹುದಾಗಿದೆ, ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ವಿವರವಾಗಿ ತಿಳಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಇಂಡಿಗೋ ಸಂಸ್ಥೆಯ ಮುಖ್ಯ ಕಾರ್ಯತಂತ್ರ ಹಾಗೂ ಆದಾಯ ವಿಭಾಗದ ಸಂಜಯ್ ಕುಮಾರ್​ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿ ರಾಷ್ಟ್ರೀಯ ಲಸಿಕೆ ಅಭಿಯಾನಕ್ಕೆ ಕೊಡುಗೆ ನೀಡಬೇಕೆಂದೆನಿಸಿತು, ಹಾಗೂ ಲಸಿಕೆ ಪಡೆಯುವುದನ್ನು ಉತ್ತೇಜಿಸುವುದಕ್ಕಾಗಿ ಈ ರಿಯಾಯಿತಿಯನ್ನು ಘೋಷಿಸಲಾಗಿದೆ ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!