
ಭಾರತದಲ್ಲಿ ವಿಶ್ವದಲ್ಲೇ ಅಗ್ಗದ ಸ್ಮಾರ್ಟ್ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಗೂಗಲ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ ಹೊಸ ‘ಜಿಯೋಫೋನ್ ನೆಕ್ಸ್ಟ್’ ಸೆಪ್ಟೆಂಬರ್ 10 ರ ಗಣೇಶ ಚತುರ್ಥಿ ದಿನದಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಗುರುವಾರ ತಿಳಿಸಿದ್ದಾರೆ.
“ನಿರ್ದಿಷ್ಟವಾಗಿ ಈ ಫೋನ್ಗಾಗಿಯೆ ನಮ್ಮ ತಂಡಗಳು ಆಂಡ್ರಾಯ್ಡ್ನ ವಿಶೇಷ ಆವೃತ್ತಿಯನ್ನು ಅತ್ಯುತ್ತಮಗೊಳಿಸಿವೆ. ಈ ಫೋನ್ ಅನ್ನು ಭಾರತಕ್ಕಾಗಿಯೆ ತಯಾರಿಸಲಾಗಿದ್ದು, ಮೊದಲ ಬಾರಿಗೆ ಸ್ಮಾರ್ಟ್ಫೋನ್ ಬಳಸುವ ಬಳಕೆದಾರರಿಗಾಗಿ ನಿರ್ಮಿಸಲಾಗಿದೆ” ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
“ನಮ್ಮ ಜೀವನ ಮತ್ತು ಕೆಲಸದ ಹಲವು ಅಂಶಗಳು ಆನ್ಲೈನ್ನಲ್ಲಿ ನಡೆಯುತ್ತಿರುವ ಸಮಯದಲ್ಲಿ, ತಂತ್ರಜ್ಞಾನವನ್ನು ಎಲ್ಲರಿಗೂ ಇನ್ನೂ ಸುಲಭವಾಗಿ ಮತ್ತು ಸಹಾಯಕವಾಗುವಂತೆ ಮಾಡುವುದು ಮುಖ್ಯವಾಗಿದೆ. ರಿಲಯನ್ಸ್ ಜಿಯೋ ಜೊತೆಗಿನ ನಮ್ಮ ಪಾಲುದಾರಿಕೆಯ ಮುಖ್ಯ ಗುರಿ ಇದಾಗಿದೆ” ಎಂದು ಸುಂದರ್ ಪಿಚೈ ಹೇಳಿದ್ದಾರೆ.
ಈ ಫೋನ್ ಮೊದಲು ಭಾರತದಲ್ಲಿ ಬಿಡುಗಡೆಯಾಗಲಿದ್ದು, ನಂತರ ಅದನ್ನು ವಿಶ್ವದ ಇತರ ಭಾಗಗಳಲ್ಲಿ ಬಿಡುಗಡೆಯಾಗಲಿದೆ.