
ಕಿರಿಕ್ ಪಾರ್ಟಿ’ ಚಿತ್ರದ ಕಿರಿಕ್ ಖ್ಯಾತಿಯ ಸಂಯುಕ್ತ ಹೆಗ್ದೆ ವೆಬ್ ಸೀರೀಸ್ ನಲ್ಲಿ ನಟಿಸುತ್ತಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿಯೂ ನಟಿಸಿರುವ ಸಂಯುಕ್ತ ಇದೀಗ ಹಿಂದಿ ವೆಬ್ ಸಿರೀಸ್‍ನ ಸೀಸನ್-2 ‘ಪಂಚ್ ಬೀಟ್’ದಲ್ಲಿ ವಿಶೇಷ ಪಾತ್ರವ ನಿಭಾಯಿಸಿದ್ದಾರೆ.
ಹದಿಹರೆಯದವರನ್ನೇ ಗಮನದಲ್ಲಿಟ್ಟುಕೊಂಡು, ಅವರ ಆಸೆ ಆಕಾಂಕ್ಷೆ, ತುಡಿತ ಹೀಗೆ ಹಲವು ಅಂಶಗಳನ್ನು ಆಧರಿಸಿದ ಕತೆಗೆ ಆಕಾಶ್ ಚೌಬೇ ನಿರ್ದೇಶನ ಮಾಡಿದ್ದಾರೆ.
ಜೀವ ರಕ್ಷಕ ಕಲೆಗಳನ್ನು ಕಲಿತು, ಅಪ್ಪನ ಜಿಮ್ ನಡೆಸುವ ಮಿಶಾ ಹೆಸರಿನ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ನಿಜ ಜೀವನಕ್ಕೆ ಹತ್ತಿರ ಇರುವಂತ ಪಾತ್ರ. ರಿಯಲ್‍ದಲ್ಲಿ ಏನೆಲ್ಲಾ ಕಲಿತುಕೊಂಡಿದ್ದೇನೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಿರಿತೆರೆಯ ಸ್ಟಾರ್ ನಿರ್ಮಾಪಕಿ ಏಕ್ತಾಕಪೂರ್ ಬಂಡವಾಳ ಹೂಡಿದ್ದಾರೆ. ತಾರಾಗಣದಲ್ಲಿ ಪ್ರಿಯಾಂಕ್‍ಶರ್ಮಾ, ಸಮೀರ್‍ಸೋನಿ, ನಿಕಿವಾಲಿಯಾ, ಸಿಂಘುಜಾ, ಕಾಜಲ್‍ತ್ಯಾಗಿ, ಸಿದ್ದಾರ್ಥ್‍ಶರ್ಮಾ ಸೇರಿದಂತೆ ಹಲವು ಯುವ ಪ್ರತಿಭೆಗಳ ದಂಡು ಬಣ್ಣ ಹಚ್ಚಿದ್ದಾರೆ. ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು, ಇದೇ ತಿಂಗಳು 27ರಿಂದ ಕಂತುಗಳು ಪ್ರಸಾರವಾಗಲಿದೆ.