
ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ (ಜೂ.28) ಕಲ್ಯಾಣಮಂಟಪಗಳಲ್ಲಿ ಮದುವೆ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ.
ಹೊಟೇಲ್ ಪಾರ್ಟಿಹಾಲ್, ರೆಸಾರ್ಟ್ಗಳಲ್ಲೂ ಮದುವೆಗೆ ಅವಕಾಶ ನೀಡಲಾಗಿದೆ.
ಮದುವೆಗಳಿಗೆ 40 ಜನರ ಮಿತಿಗೊಳಿಸಿ ಅನುಮತಿ ನೀಡಿ ಮದುವೆಯಲ್ಲಿ ಭಾಗಿಯಾಗುವವರಿಗೆ ಪಾಸ್ ಕಡ್ಡಾಯ ಮಾಡಲಾಗಿದೆ.ಸಿಎಂ ನೇತೃತ್ವದ ಸಭೆಯಲ್ಲಿ ಇಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಡೆಲ್ಟಾ ಪ್ಲಸ್ ವೈರಸ್ ಬಗ್ಗೆ ಸಭೆ ಎಂದು ಹೇಳಲಾಗಿತ್ತು. ಆದರೆ ಲಾಕ್ ಡೌನ್ ನಿಯಮ ಇನ್ನಷ್ಟು ಸಡಿಲಿಸಿ ಆದೇಶ ಹೊರಡಿಸಲಾಗಿದೆ.