ದಿನಾಂಕ 24-06-2021 ಅಂತಾರಾಷ್ಟ್ರೀಯ ಎಂಎಸ್ಎಂಇ ದಿನ 2021 ರ ಆಚರಣೆ
ಐಸಿಎಐ, ಫಿಕ್ಕಿ, ಕೆಸಿಸಿಐ ಮತ್ತು ಎಐಸಿ - ನಿಟ್ಟೆ ಅವರಿಂದ

ಜಾಗತಿಕ ಸನ್ನಿವೇಶ ಸಣ್ಣಉದ್ಯಮಗಳ ಅಂತರಾಷ್ಟ್ರೀಯ ಮಂಡಳಿಯ (ICSB) ಪ್ರಕಾರ, ಔಪಚಾರಿಕ ಮತ್ತುಅನೌಪಚಾರಿಕ, ಮೈಕ್ರೋ, ಸಣ್ಣಮತ್ತು ಮಧ್ಯಮ ಗಾತ್ರದ ಸಂಸ್ಥೆಗಳು, (MSMEs) ಎಲ್ಲಾ ಸಂಸ್ಥೆಗಳ ಮತ್ತುಖಾತೆಗಳ ಶೇಖಡ 90% ಹಾಗೂ , ಉದ್ಯೋಗ ಕ್ಷೇತ್ರಕ್ಕೆ ಸರಾಸರಿ 70% ರಷ್ಟು ಮತ್ತು 50% ರಷ್ಟು ಜಾಗತಿಕ ಆರ್ಥಿಕತೆಯ ಜಿಡಿಪಿಯ ಪಾಲುಗಾರರಾಗಿದೆ.
ಯುನೈಟೆಡ್ ಜನರಲ್ ಅಸೆಂಬ್ಲಿಯು, ಸುಸ್ಥಿರ ಅಭಿವೃದ್ಧಿಮತ್ತುಜಾಗತಿಕ ಆರ್ಥಿಕತೆಗೆ ಎಂಎಸ್ಎಂಇಗಳ ಕೊಡುಗೆಯನ್ನು
ಸಾರ್ವಜನಿಕರಿಗೆ ಅರಿವು ಮೂಡಿಸಲು 27 ನೇ ಜೂನ್ ಅನ್ನು “ಎಂಎಸ್ಎಂಇ ದಿನ ” ಎಂದು ಘೋಷಿಸಿದೆ.
ಭಾರತೀಯ ಸನ್ನಿವೇಶ ಭಾರತದಲ್ಲಿ, 6.3 ಕೋಟಿ ಎಂಎಸ್ಎಂಇಗಳು 12 ಕೋಟಿ ಉದ್ಯೋಗಗಳನ್ನು ಒದಗಿಸುತ್ತವೆ, 45% ಭಾರತದ ರಫ್ತಿಗೆ
ಕೊಡುಗೆ ನೀಡುತ್ತವೆ ಮತ್ತು ಉತ್ಪಾದನಾ ಮೌಲ್ಯವರ್ಧನೆಯ ವಲಯದಲ್ಲಿಶೇಖಡ 30% ಕ್ಕಿಂತ ಹೆಚ್ಚು ಕೊಡುಗೆ ಇದೆ.
ಎಂಎಸ್ಎಂಇಗಳು ದೊ ಡ್ಡರಾಷ್ಟ್ರೀಯ ಮತ್ತು ಜಾಗತಿಕ ಮೌಲ್ಯ ಸರಪಳಿಗಳ ಒಂದು ಪ್ರಮುಖ ಭಾಗವಾಗಿದೆ ಮತ್ತು ಅವುಗಳ ಆರೋಗ್ಯವು ಎಲ್ಲ ಅಂತರ್ಗತ ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತುಹಲವಾರು ಸರಕು ಮತ್ತು ಸೇವೆಗಳನ್ನು ಪೂರೈಸುವ ಸಾಮರ್ಥ್ಯವನ್ನು. ಹೊಂದಿದೆ .
ಎಂಎಸ್ಎಂಇ ವಲಯವನ್ನು ನಿಯಂತ್ರಿಸಲು, ಸೂಕ್ಷ್ಮ, ಸಣ್ಣಮತ್ತುಮಧ್ಯಮ ಉದ್ಯಮಗಳಿಗೆ ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಕಾಯ್ದೆ 2006 ಮತ್ತುಎಂಎಸ್ಎಂಇಡಿ (ತಿದ್ದುಪಡಿ) ಮಸೂದೆ, 2018 ಎಂಬ
ಕಾಯ್ದೆಯನ್ನು ಸರಕಾರವು ಜಾರಿಗೆ ತಂದಿದೆ.
ಎಂಎಸ್ಎಂಇ ಮತ್ತುಸ್ಟಾರ್ಟ್ಅಪ್ನ ಪ್ರಾಮುಖ್ಯತೆ
ಎಂಎಸ್ಎಂಇ ವಲಯವು ರಾಷ್ಟ್ರದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿಗಣನೀಯ ಕೊಡುಗೆ ನೀಡಿದೆ. ಎಂಎಸ್ಎಂಇಯನ್ನು ಭಾರತೀಯ ಆರ್ಥಿಕತೆಯ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ. ಇದು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಹಿಂದುಳಿದ ಮತ್ತುಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಎಂಎಸ್ಎಂಇ ಉದ್ಯೋಗಗಳಂತೆಯೇ ನವೋದ್ಯಮಗಳು(Startups) ಬೆಳವಣಿಗೆ ಮತ್ತುಉದ್ಯೋಗ ಸೃಷ್ಟಿ ಮಾಡುವಲ್ಲಿ
ಪ್ರಮುಖವಾದ ಪಾತ್ರ ವಹಿಸುತ್ತದೆ. ನಾವೀನ್ಯತೆ ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ, ನವೋದ್ಯಮಗಳು ಪರಿಣಾಮಕಾರಿ ಪರಿಹಾರಗಳನ್ನು ಉಂಟುಮಾಡಬಹುದು ಮತ್ತುಆ ಮೂಲಕ ಸಾಮಾಜಿಕ-ಆರ್ಥಿಕ ಅಭಿವೃದ್ಧಿಮತ್ತು
ರೂಪಾಂತರದ ವಾಹನಗಳಾಗಿ ಕಾರ್ಯನಿರ್ವಹಿಸುತ್ತವೆ. ಭಾರತ ಸರ್ಕಾರದ ನೇತೃತ್ವದಲ್ಲಿ, “ಸ್ಟಾರ್ಟ್ ಅಪ್ ಇಂಡಿಯಾ”
ಎಂಬಯೋಜನೆಯು 2016 ರಲ್ಲಿಜಾರಿಗೆ ಬಂದಿದೆ.
ಅಂತರರಾಷ್ಟ್ರೀಯ ಎಂಎಸ್ಎಂಇ ದಿನ 2021 ಇದರ ಆಚರಣೆ 27 ಜೂನ್ 2021, ಭಾನುವಾರದಂದು, ಅಂತಾರಾಷ್ಟ್ರೀಯ ಎಂಎಸ್ಎಂಇ ದಿನದ ಆಚರಣೆಯು, ಜೂಮ್ ವೇದಿಕೆಯಲ್ಲಿ ಬೆಳಗ್ಗೆ 11:00 ರಿಂದ ಮಧ್ಯಾಹ್ನ 01:00 ಗಂಟೆಯವರೆಗೆ, ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್
ಇಂಡಿಯಾ (ಐಸಿಎಐ) ,ಎಫ್ಐಸಿಸಿಐ, (ಕರ್ನಾಟಕ ರಾಜ್ಯ ಕೌನ್ಸಿಲ್), ಬೆಂಗಳೂರು, ಕೆನರಾ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ (ಕೆಸಿಸಿಐ), ಮಂಗಳೂರು ಮತ್ತುಅಟಲ್ ಇನ್ಕ್ಯುಬೇಷನ್ ಸೆಂಟರ್, ನಿಟ್ಟೆಯ ಸಹಯೋಗದೊಂದಿಗೆ ಒಂದು
ಕಾರ್ಯಾಗಾರವನ್ನು ಆಯೋಜಿಸಿದೆ. ಈ ಸಂದರ್ಭದಲ್ಲಿ“ಎಂಎಸ್ಎಂಇ ಮತ್ತು ಸ್ಟಾರ್ಟ್ಅಪ್ಗಳಿಗಾಗಿ ಧನಸಹಾಯ
ಆಯ್ಕೆಗಳು ಮತ್ತುಯೋಜನೆಗಳು ಮತ್ತು ಪ್ರೋತ್ಸಾಹಕ ಧನಗಳು” ಎಂಬ ವಿಷಯದ ಮೇಲೆ ವೆಬ್ನಾರ್ ಅನ್ನು ಆಯೋಜಿಸಲಾಗಿದೆ.
ಈ ವೆಬ್ನಾರ್ನ ಸಂಪನ್ಮೂಲ ವ್ಯಕ್ತಿಗಳಾಗಿ ಸಿಎ.ಕೆ.ಉಲ್ಲಾಸ್ ಕಾಮತ್, ಅಧ್ಯಕ್ಷರು, ಎಫ್ಐಸಿಸಿಐ ಕರ್ನಾಟಕ ರಾಜ್ಯ
ಕೌನ್ಸಿಲ್ ಮತ್ತುಐಸಿಎಐನ ಮಂಗಳೂರು ಶಾಖೆಯ ನಿಕಟ ಪೂರ್ವ ಅಧ್ಯಕ್ಷರಾದ, ಸಿಎ ಎಸ್.ಎಸ್. ಎಸ್.ಎಸ್.ನಾಯಕ್ ಪಾಲ್ಗೊಳ್ಳಲಿದ್ದಾರೆ. ಎಐಸಿ ನಿಟ್ಟೆಯ ಸಿಇಒ ಡಾ. ಎ.ಪಿ.ಅಚಾರ್ ಮತ್ತುಕೆಸಿಸಿಐ ಮಂಗಳೂರಿನ ಅಧ್ಯಕ್ಷರಾದ ಶ್ರೀ ಐಸಾಕ್ ವಾಸ್ ಅವರು ಈ ವೆಬ್ನಾರ್ನ ಪ್ಯಾನಲಿಸ್ಟ್ಗಳಾಗಿರುತ್ತಾರೆ. ಶ್ರೀ.ಬಿ.ಯೋಗಿಶ್ ಆಚಾರ್ಯ, ಜನರಲ್ ಮ್ಯಾನೇಜರ್ ಮತ್ತು ಸರ್ಕಲ್ ಮುಖ್ಯಸ್ಥರು, ಮಂಗಳೂರು ವೃತ್ತ, ಕೆನರಾ ಬ್ಯಾಂಕ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಯಾರು ಭಾಗವಹಿಸಬಹುದು?
ಚಾರ್ಟರ್ಡ್ ಅಕೌಂಟೆಂಟ್ಸ್, ಕಂಪನಿ ಸೆಕ್ರೆಟರೀಸ್, ಸಿಎ ಮತ್ತುಸಿಎಸ್ ವಿದ್ಯಾರ್ಥಿಗಳು, ಎಫ್ಐಸಿಸಿಐ ಸದಸ್ಯರು, ಕೆಸಿಸಿಐ ಸದಸ್ಯರು, ಎಐಸಿ ಇನ್ಕ್ಯುಬೇಟೀಸ್, ಮೈಕ್ರೋ, ಸಣ್ಣ ಮತ್ತುಮಧ್ಯಮ ಉದ್ಯಮಗಳು (ಎಂಎಸ್ಎಂಇ), ನವೋದ್ಯಮಗಳು (ಸ್ಟಾರ್ಟ್ಅಪ್ ಗಳು), ಮಹತ್ವಾಕಾಂಕ್ಷಿ ಉದ್ಯಮಿಗಳು, ಬಿಸಿನೆಸ್ ಸ್ಕೂಲ್ ಪ್ರಾಧ್ಯಾಪಕರು, ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು, ವಾಣಿಜ್ಯ ವಿದ್ಯಾರ್ಥಿಗಳು, ಏಂಜಲ್ ಹೂಡಿಕೆದಾರರು, ವೆಂಚರ್ ಕ್ಯಾಪಿಟಲಿಸ್ಟ್ಗಳು, ಬ್ಯಾಂಕಿಂಗ್ ಮತ್ತುಹಣಕಾಸು ವೃತ್ತಿಪರರು, ವಿವಿಧ ಉದ್ಯಮದ ತಜ್ಞರು ಒಳಗೊಂಡಿರುವ ಈ ಕಾರ್ಯಕ್ರಮದ ಲಾಭವನ್ನು ಪಡೆಯಬಹುದು.
ವೆಬ್ನಾರ್ನ ಮುಖ್ಯ ಉದ್ದೇಶವೇನೆಂದರೆ ಎಂಎಸ್ಎಂಇ ಮತ್ತುನವೋದ್ಯಮಗಳ ಬಗ್ಗೆಜಾಗೃತಿ ಮತ್ತು ಜ್ಞಾನವನ್ನು ಹೆಚ್ಚಿಸುವುದು ಮತ್ತು ಅವರಿಗೆ ಲಭ್ಯವಿರುವ ವಿವಿಧ ಧನಸಹಾಯ ಆಯ್ಕೆಗಳು, ಯೋಜನೆಗಳು ಮತ್ತುಪ್ರೋತ್ಸಾಹಕಗಳ
ಬಗ್ಗೆ ಮತ್ತು ಉದ್ಯಮಶೀಲತೆಯನ್ನು ಪ್ರಚಾರ ಮಾಡುವುದು.
ವೆಬ್ನಾರ್ನ ಜೂಮ್ ಲಿಂಕ್:
https://zoom.us/j/91994291753?pwd=STdJaUJ6cUhnK205bUdEbHRIaHptQT09
ಮೀಟಿಂಗ್ ಐಡಿ: 919 9429 1753
ಪಾಸ್ವರ್ಡ್: icai