
ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ (ಗ್ರಾಮೀಣ ಕೂಟ) ಬ್ರಹ್ಮವರ ಇವರಿಂದ ಕರೋನಾ ವಾರಿಯರ್ಸ ಗಳ ಆರೋಗ್ಯ ದೃಷ್ಟಿಯಿಂದ ಉಡುಪಿ ಜಿಲ್ಲಾ ಪತ್ರಕರ್ತ ಸಂಘಕ್ಕೆ 100 N95 ಮಾಸ್ಕ ಮತ್ತು 100Ml ನ 100 ಸ್ಯಾನಿಟೈಸರ್ ಗಳನ್ನು ವಿತರಿಸಲಾಯಿತು.
ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ (ಗ್ರಾಮೀಣ ಕೂಟ) ನ ಡಿವಿಷನಲ್ ಮ್ಯಾನೇಜರ್ ಮಂಜುನಾಥ ಐ ಎಂ , ಮಾತನಾಡಿ ಪತ್ರಕರ್ತರ ಪರಿಶ್ರಮ ಸೇವೆಯನ್ನು ಶ್ಲಾಘಿಸಿದರು , ಪ್ರೆಸ್ ಕ್ಲಬ್ ನಾ ಜಿಲ್ಲಾಧ್ಯಕ್ಷರು ರಾಜೇಶ್ ಮಾಸ್ಕ ಮತ್ತು ಸ್ಯಾನಿಟೈಸರ್ ಸ್ವಿಕರಿಸಿ ಮಾತನಾಡಿ ಸಂಸ್ಥೆಯ ಸಾಮಾಜಿಕ ಕಳಕಳಿ ಯನ್ನು ಅಭಿನಂದಿಸಿದರು.ಏರಿಯಾ ಮ್ಯಾನೇಜರ್ ಪ್ರದೀಪ್ ಕುಮಾರ್ ಬಿ.ಎಸ್ ಮತ್ತು ಬ್ರಾಂಚ್ ಮ್ಯಾನೇಜರ್ ರಘು ಎಸ್ ಇತರರು ಉಪಸ್ಥಿತರಿದ್ದರು.