ತಾಜಾ ಸುದ್ದಿಗಳು

ಭಾರತದ ಕೋವ್ಯಾಕ್ಸಿನ್ ಗೆ ಬಾರೀ ಆಘಾತ : 324 ಮಿಲಿಯನ್ ಡಾಲರ್ ಒಪ್ಪಂದ ಮುರಿದ ಬ್ರೆಜಿಲ್!!!

ಬ್ರೆಜಿಲ್ : ಭಾರತ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯೊಂದಿಗೆ ಬ್ರೆಜಿಲ್ ಮಾಡಿಕೊಂಡಿದ್ದ ಲಸಿಕೆ ಖರೀದಿ ಒಪ್ಪಂದ ಮುರಿದು ಬಿದ್ದಿದೆ. ಇನ್ನೊಂದೆಡೆ ಲಸಿಕೆ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಅನ್ನೋ ಆರೋಪ ಕೇಳಿಬಂದಿದೆ.

ಬ್ರೆಜಿಲ್ ಸರಕಾರ ಕೊರೊನಾ ವೈರಸ್ ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಬ್ರೆಜಿಲ್ ಸರಕಾರ ಬರೋಬ್ಬರಿ 324 ಮಿಲಿಯನ್ ಡಾಲರ್ ವೆಚ್ಚದಲ್ಲಿ 20 ಮಿಲಿಯನ್ ಡೋಸ್ ಕೋವ್ಯಾಕ್ಸಿನ್ ಲಸಿಕೆ ಖರೀದಿಯ ಕುರಿತು ಫೆಬ್ರವರಿ ತಿಂಗಳಿನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಆದರೆ ಇತರ ಲಸಿಕೆಗಳಿಗೆ ಹೋಲಿಸಿದ್ರೆ ಕೋವ್ಯಾಕ್ಸಿನ್ ಲಸಿಕೆ ಹೆಚ್ಚು ದುಬಾರಿ ಯಾಗಿದೆ. ಮಾತ್ರವಲ್ಲದೇ ಔಷಧ ನಿಯಂತ್ರಕರು, WHO ಅನುಮೋದನೆ ಯಂತಹ ಪ್ರಮುಖ ಹಂತ ಗಳು ಬಾಕಿ ಇರುವಾಗಲೇ ಒಪ್ಪಂದ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ.

ಕೊರೊನಾ ಲಸಿಕೆ ಒಪ್ಪಂದಿಂದಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನರೊ ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದ್ದು, ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಲಸಿಕೆ ಒಪ್ಪಂದದ ಬಳಿಕ ಅಕ್ರಮದ ಕುರಿತಾಗಿ ಮಧ್ಯವರ್ತಿಗಳು ಸಾರ್ವಜನಿಕವಾಗಿ ಕಳವಳ ವ್ಯಕ್ತಪಡಿ ಸಿದ್ದು ಬೊಲ್ಸೊನರೊ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಅವ್ಯವಹಾರದ ಕುರಿತಾದ ತಮ್ಮ ಆತಂಕವನ್ನು ಅಧ್ಯಕ್ಷರಿಗೆ ವೈಯಕ್ತಿಕವಾಗಿ ತಿಳಿಸಿದ್ದಾಗಿ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತ್ ಬಯೋಟೆಕ್ ಜತೆಗಿನ ಒಪ್ಪಂದ ಅಮಾನತುಗೊಂಡಿದ್ದು, ಅಕ್ರಮದ ಕುರಿತಾದ ಆರೋಪಗಳ ಬಗ್ಗೆ ತಮ್ಮ ತಂಡ ತನಿಖೆ ನಡೆಸಲಿದೆ. ಅಲ್ಲದೇ ಒಪ್ಪಂದವನ್ನು ಸೆನೆಟ್ ಸಮಿತಿಯೊಂದು ಕೂಡ ತನಿಖೆ ನಡೆಸುತ್ತಿದೆ ಎಂದು ಆರೋಗ್ಯ ಸಚಿವ ಮರ್ಸೆಲೊ ಕ್ಯುರೊಗಾ ತಿಳಿಸಿದ್ದಾರೆ .

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker