ತಾಜಾ ಸುದ್ದಿಗಳು

ಒಲಿಂಪಿಕ್ ಗೆ ಅರ್ಹತೆ ಪಡೆದರು ಭಾರತದ ಮೊದಲ ಈಜುಗಾರ್ತಿ…

ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್ ಗೆ ಸ್ಥಾನ ಪಡೆದ ಭಾರತದ ಮೊದಲ ಮಹಿಳಾ ಈಜುಪಟು ಎಂದು ಮಾನಾ ಪಟೇಲ್ ಯುನಿವರ್ಸಾಲಿಟಿ ಕೋಟಾದಡಿಯಲ್ಲಿ ಸಾಧನೆ ಮಾಡಿದ್ದಾರೆ.

ಒಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮೂವರು ಈಜುಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಕ್ರೀಡಾ ಸಚಿವ ಕಿರಣ್​ ರಿಜಿಜು ಅವರು ಈ ಕುರಿತಾಗಿ ಟ್ವಿಟ್ ಮಾಡಿದ್ದು, ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಮಹಿಳಾ ಮತ್ತು 3ನೇ ಭಾರತೀಯ ಈಜುಗಾರ್ತಿ ಮಾನಾ ಪಟೇಲ್​ಗೆ ಶುಭಾಶಯ ಎಂದು ಹೇಳಿದ್ದಾರೆ.

200 ಮೀಟರ್‌ ಬಟರ್‌ಪ್ಲೈ ವಿಭಾಗದಲ್ಲಿ ಸಾಜನ್‌ ಪ್ರಕಾಶ್ ನೇರ ಅರ್ಹತೆ ಪಡೆಯುವ ಮೂಲಕ ಸಾಧನೆ ಮಾಡಿದ್ದರು. ನಂತರ ಶ್ರೀಹರಿ ನಟರಾಜ್‌ ಅವರೂ ಅರ್ಹತೆ ಸಾಧಿಸಿದ್ದರು. ಇದೀಗ ಮಾನಾ ಪಟೇಲ್ ಅವರೂ ಕೂಡ : ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker