
ಚೆನ್ನೈ: ಚೆನ್ನೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪೋಲೆಂಡ್ ನ ವಿದೇಶಿ ಅಂಚೆ ಕಚೇರಿಯಿಂದ ಬಂದ ಪಾರ್ಸಲ್‌ನಲ್ಲಿ 107 ಜೀವಂತ ಜೇಡಗಳನ್ನು ಪತ್ತೆ ಮಾಡಿದ್ದಾರೆ.
ತಮಿಳುನಾಡಿನ ಅರುಪುಕೋಟೈನ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಪಾರ್ಸೆಲ್ ಬಂದಿದೆ ಎಂದು ಹೇಳಲಾಗಿದೆ.
ಥರ್ಮೋಕಾಲ್ ಬಾಕ್ಸ್ ನಲ್ಲಿ 107 ಸಣ್ಣ ಪ್ಲಾಸ್ಟಿಕ್ ಬಾಟಲುಗಳು ಬೆಳ್ಳಿಯ ಹಾಳೆ ಹಾಗೂ ಹತ್ತಿಯಲ್ಲಿ ಸುತ್ತಿಕೊಂಡಿದ್ದು, ಪರಿಶೀಲಿಸಿದಾಗ, ಪ್ರತಿ ಬಾಟಲಿಯೊಳಗೆ ಜೀವಂತ ಜೇಡಗಳು ಕಂಡುಬಂದಿವೆ. ಈ ಸಂಬಂಧ ಹೆಚ್ಚಿನ ತನಿಖೆ ಕೈಗೊಳ್ಳಲು ಕಸ್ಟಮ್ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ವರದಿಯಾಗಿದೆ.