
ದೆಹಲಿ :
ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ(45) ಆಯ್ಕೆಯಾಗಿದ್ದಾರೆ.
ವಿಧಾನಸಭೆ ಆಯ್ಕೆಯಾಗದ ಕಾರಣಕ್ಕೆ ತೀರಥ್ ಸಿಂಗ್ ರಾವತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೊಸ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಆಯ್ಕೆಯಾಗಿದ್ದಾರೆ. ಕಟೀಮಾ ಕ್ಷೇತ್ರದಿಂದ ಎರಡು ಸಲ ವಿಧಾನ ಸಭಾ ಸದಸ್ಯರಾಗಿದ್ದಾರೆ.
4ತಿಂಗಳಲ್ಲೇ ಈ ರಾಜ್ಯ 3 ಮುಖ್ಯಮಂತ್ರಿಗಳನ್ನು ಕಂಡಿದೆ.
ನನ್ನ ಪಕ್ಷವು ಸಾಮಾನ್ಯ ಸೇವಕನನ್ನು ಮಾಜಿ ಸೈನಿಕನ ಮಗನನ್ನು ನೇಮಿಸಿದೆ. ಈ ಸವಾಲನ್ನು ನಾನು ಉತ್ತಮವಾಗಿ ಸ್ವೀಕರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಡೆಹ್ರಾಡೂನ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಮುಖ್ಯಮಂತ್ರಿ ಬಗ್ಗೆ ಒಮ್ಮತದ ಆಯ್ಕೆ ನಡೆದಿದೆ. ಮುಂದಿನ 8ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು ಚುನಾವಣೆಯಲ್ಲಿ ಪುಷ್ಕರ್ ಮಹತ್ವದ ಪಾತ್ರ ವಹಿಸುವ ಸವಾಲಿದೆ.