
ತನ್ನ ಸಮಾಜದ ಅಭಿವೃದ್ಧಿಗೆ ನೂರಾರು ಹೋರಾಟಗಳನ್ನು ನಡೆಸಿದ ಸುಂದರ್ ಕಪ್ಪೆಟ್ಟು ಅವರು ಸಮಾಜದ ಜನರಲ್ಲಿ ಆತ್ಮವಿಶ್ವಾಸ ತುಂಬಿ ಅವರು ಮುನ್ನೆಲೆಗೆ ಬರುವಂತೆ ಪ್ರೇರೇಪಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಒಪ್ಪುವಂತಹ ಆರೋಗ್ಯಕರ ಹೋರಾಟವನ್ನು ಕೈಗೊಂಡು ತನ್ನ ಸಮಾಜದ ಏಳಿಗೆಗಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡವರು ಸುಂದರ ಕಪ್ಪೆಟ್ಟು ಎಂದು ಶಾಸಕ ರಘುಪತಿ ಭಟ್ ಹೇಳಿದರು
ಇಂದು ದಿನಾಂಕ 04-07-2021 ರಂದು ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ನಡೆದ ಸುಂದರ್ ಕಪ್ಪೆಟ್ಟು ಅವರ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಸುಂದರ್ ಕಪ್ಪೆಟ್ಟು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಿದರು.
ಸುಂದರ ಕಪ್ಪೆಟ್ಟು ಅವರ ಅಗಲಿಕೆ ಕೇವಲ ಒಂದು ಸಮುದಾಯಕ್ಕೆ ಅಲ್ಲ ಇಡೀ ಸಮಾಜಕ್ಕೆ ಆದ ನಷ್ಟ. ಅವರು ಉತ್ತಮ ಮಾರ್ಗದರ್ಶನ ನೀಡಿ ಯುವಕರ ತಂಡವನ್ನು ಕಟ್ಟಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.