ತಾಜಾ ಸುದ್ದಿಗಳು
ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗಿನ್ನು ವಿಸ್ಟಾಡೋಮ್ ಪ್ರಯಾಣ!

ಬೆಂಗಳೂರು: ರೈಲು ಪ್ರಯಾಣಿಕರು ಕಾತುರದಿಂದ ಕಾಯುತ್ತಿದ್ದ ವಿಸ್ಟಾಡೋಮ್ ಪ್ರಯಾಣ ಜು.7ರಿಂದ ಆರಂಭವಾಗಲಿದೆ.
ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಮೂರು ರೈಲುಗಳ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿಯನ್ನು ತೆಗೆದು ತಲಾ ಎರಡು ವಿಸ್ಟಾಡೋಮ್ ಕೋಚ್‌ಗಳನ್ನು ಜೋಡಿಸಲಾಗಿದೆ.
ರೈಲು ಪ್ರಯಾಣದ ಬುಕ್ಕಿಂಗ್ ಇಂದಿನಿಂದ (ಜು 3)ಆರಂಭವಾಗಿದ್ದು, ಯಶವಂತಪುರದಿಂದ ಮಂಗಳೂರಿಗೆ 1,470 ರೂ. ದರ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊದಲ ರೈಲು ಯಶವಂತಪುರ-ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ಸ್ಪೆಷಲ್ ಜು.7ರಂದು ಯಶವಂತಪುರದಿಂದ ಹೊರಡಲಿದೆ. ಎರಡನೇ ರೈಲು ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್ ಸ್ಪೆಷಲ್ ಜು. 8 ರಂದು ಯಶವಂತಪುರದಿಂದ ಹಾಗೂ ಮೂರನೇ ರೈಲು ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ಸ್ಪೆಷಲ್ ಎಕ್ಸ್‌ಪ್ರೆಸ್ ಜು.10 ರಂದು ಯಶವಂತಪುರದಿಂದ ಹೊರಡಲಿದೆ ಎಂದು ಮಾಹಿತಿ ನೀಡಿದ್ದಾರೆ.