ರೀನಾ-ಕಿರಣ್ ಗೂ 15 ವರ್ಷಕ್ಕೆ ಡಿವೋರ್ಸ್ : “ಆಲ್ ಇಸ್ ವೆಲ್” ಅನ್ನುತ್ತಲ್ಲೇ ಅಮಿರ್ ಖಾನ್ ಕಿಲಾಡಿತನ

ಮುಂಬೈ : ಬಾಲಿವುಡ್ ನಟ ಅಮೀರ್ ಖಾನ್-ಕಿರಣ್ ರಾವ್ ತಮ್ಮ ವೈವಾಹಿಕ ಜೀವನದಿಂದ ಹೊರ ಬಂದು ವಿಚ್ಛೇದನ ಘೋಷಿಸಿದ್ದಾರೆ. ಇವರ ಡಿವೋರ್ಸ್ ಗೆ ಕಾರಣಗಳು ಇನ್ನೂ ನಿಗೂಢವಾಗಿಯೇ ಇವೆ. ಆದರೆ, ಈ ಸೆಲೆಬ್ರಿಟಿ ಡಿವೋರ್ಸ್ ಹಿಂದೆ ಕುತೂಹಲಕರ ಸಂಗತಿಯೊಂದು ಅಡಗಿದೆ.
ಹೌದು, ಕಿರಣ್ ರಾವ್ ಹಾಗೂ ಅಮೀರ್ ಖಾನ್ ದಾಂಪತ್ಯ 15 ವರ್ಷಗಳ ಸುದೀರ್ಘ ಕಾಲದಿಂದ ನಡೆದುಕೊಂಡು ಬಂದಿದೆ. 15 ವರ್ಷಕ್ಕೆ ಅಮೀರ್ ಖಾನ್ ಅವರು ಕಿರಣ್ ರಾವ್ ಅವರಿಗೆ ಡಿವೋರ್ಸ್ ನೀಡಿದ್ದಾರೆ. ವಿಶೇಷವೆಂದರೆ ಮೊದಲ ಪತ್ನಿ ರೀನಾ ದತ್ತಾಗೂ ಅಮೀರ್ 16 ವರ್ಷ ಗಳ ದಾಂಪತ್ಯ ಜೀವನದ ಬಳಿಕ ವಿಚ್ಛೇದನ ನೀಡಿದ್ದರು. ಈಗ ಕಿರಣ್ ರಾವ್ ಜೊತೆಗಿನ ದಾಂಪತ್ಯವೂ ಹೆಚ್ಚು ಕಡಿಮೆ ಅಷ್ಟೇ ವರ್ಷದಲ್ಲಿ ಅಂತ್ಯವಾಗಿದೆ.
ಸಿನಿಮಾದಲ್ಲಿ ‘’ಮಿಸ್ಟರ್ ಪರ್ಫೆಕ್ಟ್’ ಎಂದೆ ಖ್ಯಾತಿ ಪಡೆದಿರುವ ಅಮೀರ್ ವ್ಯಯಕ್ತಿಕ ಲೈಫಿನಲ್ಲಿ ಎಡವುತ್ತಿರುವುದು ಅಭಿಮಾನಿಗಳಲ್ಲಿ ನೋವನ್ನುಂಟು ಮಾಡಿದೆ.
ವಿಚ್ಛೇದನವಾದರೂ ಇಬ್ಬರೂ ಸ್ನೇಹಿತರಾಗಿ ಮುಂದುವರಿಯುತ್ತಾರಂತೆ. ತಮ್ಮ ಮಗನನ್ನು ಜೊತೆಯಾಗಿ ನೋಡಿಕೊಳ್ಳುತ್ತಾರಂತೆ. ಜೊತೆಗೆ ತಮ್ಮ ಫೌಂಡೇಷನ್ ಕೆಲಸಗಳನ್ನೂ ಜೊತೆಯಾಗಿ ನಿಭಾಯಿಸಲಿದ್ದಾರೆ ಎಂದು ಘೋಷಿಸಿದ್ದಾರೆ.