
ದಾವಣಗೆರೆ ಸಮೀಪ ಇಂದು ಬೆಳಗಿನ ಜಾವ ಕಾರು ಹಾಗೂ ಕಂಟೈನರ್ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ
ಕುಂದಾಪುರದ ಹಿರಿಯ ಛಾಯಾಗ್ರಾಹಕ ನಾವುಂದ ಮಾನಸ ಸ್ಟುಡಿಯೋ ಮಾಲಕ ಅಶೋಕ್ ಶೆಟ್ಟಿ ಹೇರೂರ್ (58) ಹಾಗೂ ಅವರ ಪುತ್ರ ಪನ್ನಗ (24) ಅವರು ಗಂಬೀರವಾಗಿ ಗಾಯಗೊಂಡಿದ್ದಾರೆ.
ಅಶೋಕ್ ಶೆಟ್ಟಿ ಅವರು ತಮ್ಮ ಪುತ್ರ ಹಾಗೂ ಕುಮಾರ್ ಎಂಬವರ ಜೊತೆ ಮದುವೆಕಾರ್ಯಕ್ರಮವೊಂದರ ಚಿತ್ರೀಕರಣ ಮುಗಿಸಿ ಊರಿಗೆ ವಾಪಸು ಹಿಂದಿರುಗುತ್ತಿದ್ದ ವೇಳೆ ಕಾರು ಹಿಂಬದಿಯಿಂದ ಕಂಟೈನರ್ ಗೆ ಡಿಕ್ಕಿ ಹೊಡೆದಿದೆ.
ಕಾರಿನ ಹಿಂಬದಿ ಕುಳಿತಿದ್ದ ಕುಮಾರ್ ಅವರು ಅಪಾಯದಿಂದ ಪಾರಾಗಿದ್ದಾರೆ.
ಅಶೋಕ್ ಶೆಟ್ಟಿ ಅವರ ಪತ್ನಿ ಮನೆ ಬಾರಕೂರು ಕಾವಡಿ ಬಳಿ ಇದ್ದು,ಅಶೋಕ್ ಶೆಟ್ಟಿ ಅವರು ಸ್ಟುಡಿಯೋ ನಿರ್ವಹಿಸುವ ಮೊದಲು ಬಾರಕೂರು ನಂಬಿಯಾರ್ ಆಯುರ್ವೇದ ಶಾಪ್ ಅಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದರು..
ಅಶೋಕ್ ಶೆಟ್ಟಿ ಅವರು ಕುಂದಾಪುರ ತಾಲೂಕು ಛಾಯಾ ಗ್ರಾಹಕರ ಸಂಘ ಹಾಗೂ ರಾಜ್ಯ ಛಾಯಾಗ್ರಾಹಕರ ಸಂಘಟನೆ ಯ ಮಾಜಿ ಅಧ್ಯಕ್ಷರು,ಹಾಗೂ ಸಂಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ಧರು.