ಕೋಟ್ಯಾಧೀಶನ ಪುತ್ರ ; ಮಂಗಳಮುಖಿಯಾಗಿ ಬದಲಾದ..!!

ತೆಲಂಗಾಣ : ಕೋಟಿ ಆಸ್ತಿ ಹೊಂದಿದ್ದ ಯುವಕನೊಬ್ಬ ಮಂಗಳಮುಖಿಯಾಗಿ ಬದಲಾಗಿರುವ ಘಟನೆ ಇಲ್ಲಿನ ವೇಮುಲವಾಡದಲ್ಲಿ ನಡೆದಿದೆ.
ಪೆದ್ದಪಲ್ಲಿ ಜಿಲ್ಲೆಯ ಮುಂಜಪಲ್ಲಿ ಗ್ರಾಮದ ವಂಗ ಮಹೇಶ್ ಎಂಬ ಯುವಕ ಕಳೆದೆರಡು ತಿಂಗಳಿನಿಂದ ನಾಪತ್ತೆಯಾಗಿದ್ದ. ಹೀಗಾಗಿ, ಕುಟುಂಬಸ್ಥರು ಮಹೇಶ್ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಷ್ಟರಲ್ಲೇ ಮಹೇಶ್ ರಾಜನ್ನ ಸಿರಿಸಿಲ್ಲ ಜಿಲ್ಲೆಯ ವೇಮುಲವಾಡದಲ್ಲಿ ಇರುವುದು ಆತನ ಪೋಷಕರಿಗೆ ತಿಳಿದಿದೆ. ಕೂಡಲೇ ಪೋಷಕರು ಮಹೇಶ್ ನೋಡಲು ತೆರಳಿದ್ರು. ಪ್ಯಾಂಟ್, ಶರ್ಟ್ ಹಾಕಿಕೊಂಡು ಸ್ಮಾರ್ಟ್ ಆಗಿ ಕಾಣಿಸುತ್ತಿದ್ದ ಮಹೇಶ್, ಏಕಾಏಕಿ ಮಂಗಳಮುಖಿಯಾಗಿ ಕಾಣಿಸಿದ್ದಾನೆ.
ಮಹೇಶ್ಗೆ ನಮ್ಮ ಜೊತೆ ಬರುವಂತೆ ಬಂಧುಗಳು, ಸ್ನೇಹಿತರು ಮತ್ತು ಪೋಷಕರು ಹೇಳಿದ್ದಾರೆ. ಆದ್ರೆ, ಮಹೇಶ್ ಇದಕ್ಕೆ ನಿರಾಕರಿಸಿದ್ದಾನೆ. ಹೀಗಾಗಿ, ಮಹೇಶ್ ಮೇಲೆ ಸಿಡಿಮಿಡಿಗೊಂಡ ಪೋಷಕರು ರಸ್ತೆ ಮಧ್ಯೆದಲ್ಲೇ ಎಲ್ಲರೂ ನೋಡು-ನೋಡುತ್ತಿದ್ದಂತೆ ಹಿಗ್ಗಾಮುಗ್ಗಾ ಥಳಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಮಗೆ 20 ಎಕರೆ ಭೂಮಿ ಇದೆ. ಅವನಿಗೆ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ ಎಂದು ಮಹೇಶ್ ಪೋಷಕರು ಕಣ್ಣೀರು ಹಾಕಿದ್ದಾರೆ