ಮನೆ ಕಳ್ಳತನ ಮಾಡುತ್ತಿದ್ದ .ಆ ಖತರ್ನಾಕ್ ಗ್ಯಾಂಗ್ ಸಿಕ್ಕಿಬಿದ್ದಿದ್ದೇ ರೋಚಕ!

ಕಲಬುರಗಿ: ಒಂದೇ ಕುಟುಂಬದ 9 ಮಂದಿ ಮನೆಕಳ್ಳತನ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಈ ಪೈಕಿ 7 ಜನರನ್ನು ಕಲಬುರಗಿ ಚೌಕ್ ಪೊಲೀಸರು ಬಂಧಿಸಿ ಮತ್ತಿಬ್ಬರ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತರು ಕಲಾವತಿ, ಗಣೇಶ್, ಶ್ರವಣ್, ರಘು, ಲಾಲು, ರತ್ನ, ಶಿವಾ. ಬಲೂನ್ ಮಾರಾಟ ನೆಪದಲ್ಲಿ ಈ ಗ್ಯಾಂಗ್ನ ಕಲಾವತಿ ಬೆಳಗ್ಗೆ ವೇಳೆ ಊರುಗಳಿಗೆ ತೆರಳಿ ಅಲ್ಲಿ ಆಕೆ ಯಾವ ಮನೆಗೆ ಕನ್ನ ಹಾಕಬೇಕೆಂದು ಸ್ಕೆಚ್ ಹಾಕುತ್ತಿದ್ದಳು. ಅದರಂತೆ ಆ ಸಂಜೆ ಇಲ್ಲವೇ ರಾತ್ರಿ ಮಹಿಳೆಯ ಮಕ್ಕಳು, ಅಣ್ಣ ಮತ್ತು ತಮ್ಮನ ಮಕ್ಕಳು ಕಳ್ಳತನ ಮಾಡಿಕೊಂಡು ಬರುತ್ತಿದ್ದರು. ಕಲಬುರಗಿ ನಗರದ ವಿವಿಧಡೆ ಈ ಖತರ್ನಾಕ್ ಗ್ಯಾಂಗ್ ಕಳ್ಳತನ ಮಾಡಿದೆ.
ಕಳ್ಳತನದ ದುಡ್ಡಲ್ಲೇ ಇನ್ನೋವಾ ಕಾರು, ಪೋರ್ಡ್ ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಒಂದೇ ಕುಟುಂಬದ ಏಳು ಜನರನ್ನು ಕಲಬುರಗಿ ಚೌಕ್ ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳು ಕಲಬುರಗಿಯ ಸಾವಳಗಿ ಮತ್ತು ಸುಲ್ತಾನಪುರದಲ್ಲಿ ವಾಸವಿದ್ದರು. ಬಂಧಿತರಿಂದ 163 ಗ್ರಾಂ ಚಿನ್ನಾಭರಣ, 2 ಪಲ್ಸರ್ ಬೈಕ್, ಇನ್ನೋವಾ ಕಾರು, ಪೋರ್ಡ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.