
ಮಂಗಳೂರು: ವೀಕೆಂಡ್ ಕರ್ಪ್ಯೂ ವೇಳೆ 70 ಲಕ್ಷ ಮೌಲ್ಯದ ಕಳ್ಳತನ ನಡೆದಿರುವ ಘಟನೆ ನಗರದಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಮಂಗಳೂರಿನ ಬಲ್ಮಠದಲ್ಲಿರುವ ಮೊಬೈಲ್ ಶೋರೂಂವೊಂದರಿಂದ ಐಫೋನ್ ಸೇರಿದಂತೆ ಸುಮಾರು 70 ಲಕ್ಷ ರೂ.ಮೌಲ್ಯದ ಮೊಬೈಲ್ ಗಳನ್ನು ಕಳ್ಳತನ ಮಾಡಿದ್ದಾರೆ. ಕಳ್ಳತನದ ಸುಳಿವು ಸಿಗದಂತೆ ಸಿಸಿಟಿವಿ ಕ್ಯಾಮರ್ ಹಾರ್ಡ್ ಡಿಸ್ಕ್ ನ್ನು ಕೊಂಡು ಹೋಗಿದ್ದಾರೆ. ಷೋರೂಮ್ ಬಗ್ಗೆ ಸಾಕಷ್ಟು ಗೊತ್ತಿರುವವೇ ಈ ಕೃತ್ಯ ಮಾಡಿರುವ ಅನುಮಾನವಿದೆ. ಕಳ್ಳತನ ನಡೆದಿರುವುದು ಸೋಮವಾರ ಬೆಳಗ್ಗೆ ಶೋರೂಂ ಸಿಬ್ಬಂದಿಗಳ ಗಮನಕ್ಕೆ ಬಂದಿದ್ದು, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕದ್ರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸರು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಕೂಡ ಈ ಶೋರೂಂನಲ್ಲಿ ಕಳ್ಳತನ ನಡೆದಿತ್ತು ಎಂದು ವರದಿಯಾಗಿದೆ.