
“ಹಡಿಲು ಭೂಮಿ ಕೃಷಿ ಅಂದೋಲನ”ದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಬಡಾನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5 ಎಕರೆ ಹಡಿಲು ಭೂಮಿಯನ್ನು ಸಾವಯುವ ಕೃಷಿ ಮಾಡಲಾಗುತ್ತಿದ್ದು, ಇಂದು ದಿನಾಂಕ 07-07-2021 ರಂದು ಆರ್ಯನ್ ಹೋಟೆಲ್ ಬಳಿಯ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಶ್ರೀ ಆನಂದ್ ಪಿ. ಸುವರ್ಣ ಮತ್ಸ್ಯೋದ್ಯಮಿ ಹಾಗೂ ಶ್ರೀ ಟಿ. ರಫೀಕ್ ಸಾಹೇಬ್ ಮಾಲಕರು ಓ.ಪಿ.ಎಫ್ ಗುಜ್ಜರಬೆಟ್ಟು ಇವರೊಂದಿಗೆ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಭೂ ಮಾತೆಗೆ ಹಾಲನ್ನು ಅರ್ಪಿಸಿ ನೇಜಿ ನೀಡುವ ಮೂಲಕ ಕೈ ನಾಟಿಗೆ ಚಾಲನೆ ನೀಡಿ ಸ್ಥಳೀಯರೊಂದಿಗೆ ಸೇರಿ ನೇಜಿ ನೆಟ್ಟರು.
ಈ ಭಾಗದಲ್ಲಿ ಹಡಿಲು ಭೂಮಿ ಆಂದೋಲನಕ್ಕೆ ಸಹಕರಿಸಿದ ಸಂಘ – ಸಂಸ್ಥೆಯವರಿಗೆ, ಭೂ ಮಾಲಕರಿಗೆ, ಸ್ಥಳೀಯರಿಗೆ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಡಾನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾಕರ್ ತಿಂಗಳಾಯ, ಉಪಾಧ್ಯಕ್ಷರಾದ ಶೀಲಾ, ಹಿರಿಯ ಕೃಷಿಕರಾದ ಬಿ.ಪಿ ರಮೇಶ್ ಪೂಜಾರಿ, ಬಡಾನಿಡಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಉಮೇಶ್ ಪೂಜಾರಿ, ಸ್ಥಳೀಯರಾದ ದಿನಕರ್ ಮಾಸ್ಟರ್, ಸಂಜೀವಿನಿ ತಂಡದ ಅಧ್ಯಕ್ಷರಾದ ಲತಾ, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ, ಸದಸ್ಯರಾದ ದಿನಕರ್ ಬಾಬು, ಬಡಾನಿಡಿಯೂರು ಗ್ರಾಮ ಪಂಚಾಯತ್ ಸದಸ್ಯರು, ಸಂಜೀವಿನಿ ತಂಡದ ಸದಸ್ಯರು, ಸ್ಥಳೀಯ ಕೃಷಿಕರು, ಪ್ರಮುಖರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.