ಅಂತಾರಾಷ್ಟ್ರೀಯ

ಸ್ವೀಡನ್‌ನ ಒರೆಬ್ರೊ ಬಳಿ ವಿಮಾನ ಪತನ; 9 ಮಂದಿ ಸಜೀವ ದಹನ!

ಡಿಎಚ್‌ಸಿ -2 ಟರ್ಬೊ ಬೀವರ್ ಎಂಬ ವಿಮಾನದಲ್ಲಿ 8 ಸ್ಕೈಡೈವರ್‌ಗಳು ಮತ್ತು 1 ಪೈಲಟ್‌ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಟೇಕ್‌ ಅಪ್​ ಆದ ಕೆಲವೇ ಕ್ಷಣದಲ್ಲಿ ವಿಮಾನ ನೆಲಕ್ಕಪ್ಪಳಿಸುತ್ತಿದ್ದಂತೆ ಬೆಂಕಿ ಹೊತ್ತಿ ಉರಿದಿದೆ.

ವಿಮಾನದಲ್ಲಿದ್ದ 9 ಮಂದಿಯೂ ಸಜೀವ ದಹನಗೊಂಡಿದ್ದಾರೆ. 2019ರಲ್ಲಿ ಉತ್ತರ ಸ್ವೀಡನ್‌ನಲ್ಲಿ 9 ಸ್ಕೈಡೈವರ್‌ಗಳು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ಅವರೆಲ್ರೂ ದುರಂತ ಅಂತ್ಯ ಕಂಡಿದ್ದರು.

ಒರೆಬ್ರೊದಲ್ಲಿ ನಡೆದ ವಿಮಾನ ಅಪಘಾತದ ಬಗ್ಗೆ ನನಗೆ ದುರಂತ ಮಾಹಿತಿ ಬಂದಿರುವುದು ಬಹಳ ದುಃಖದ ಸಂಗತಿ ಎಂದು ಪ್ರಧಾನಿ ಸ್ಟೀಫನ್ ಲೋಫ್ವೆನ್ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ನನ್ನ ಆಲೋಚನೆಗಳು ಈ ಕಷ್ಟದ ಸಮಯದಲ್ಲಿ ಬಲಿಯಾದವರ ಕುಟುಂಬಗಳು ಮತ್ತು ಪ್ರೀತಿಪಾತ್ರರ ಜೊತೆ ಇವೆ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker