
ಮಂಗಳೂರು: ಜು 10 : ಮಹಿಳೆ ಸಹಿತ ಮೂವರು ಹಿರಿಯ ನಾಗರಿಕರು ಮಂಗಳೂರಿನ ಮಿನಿ ವಿಧಾನಸೌಧದ ಲಿಫ್ಟ್ನಲ್ಲಿ ಶುಕ್ರವಾರ ಬೆಳಿಗ್ಗೆ ಸಿಲುಕಿ ಹಾಕಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ತುರ್ತು ಸ್ಪಂದನೆ ಮಾಡಿ ಈ ಹಿರಿಯ ನಾಗರಿಕರನ್ನು ಲಿಪ್ಟ್ ನಿಂದ ಹೊರ ತೆಗೆಯುವಲ್ಲಿ ಸಫಲರಾಗಿದ್ದಾರೆ.
ಕಚೇರಿ ಕೆಲಸದ ನಿಮಿತ್ತ ಮಿನಿ ವಿಧಾನಸೌಧಕ್ಕೆ ಆಗಮಿಸಿದ್ದ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಸಹಿತ ಮೂವರು ಹಿರಿಯ ನಾಗರಿಕರು ಲಿಪ್ಟ್ ಮೂಲಕ ಮೇಲ್ಮಹಡಿಗೆ ಹೋಗಲು ಲಿಫ್ಟ್ ಹತ್ತಿದ್ದಾರೆ. ಲಿಫ್ಟ್ ಏರಿದ ಕೆಲವೇ ಕ್ಷಣಗಳಲ್ಲಿ ಅದು ಅರ್ಧದಲ್ಲೇ ಸ್ಥಗಿತಗೊಂಡಿದ್ದು, ಒಳಗಡೆಯಿದ್ದ ಪ್ರಯಾಣಿಕರು ಆತಂಕಕ್ಕೆ ತುತ್ತಾಗಿದ್ದಾರೆ
ಕಚೇರಿಯ ಅಧಿಕಾರಿಗಳು ಮಾಹಿತಿ ಪಡೆದು ಪಾಂಡೇಶ್ವರ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ