ಇಂದಿನಿಂದ ಉಡುಪಿ ಶ್ರೀಕೃಷ್ಣ ದರ್ಶನ ಭಾಗ್ಯ !!!

ಉಡುಪಿ, ಜುಲೈ 11,ರವಿವಾರದಿಂದ ಉಡುಪಿ ಶ್ರೀಕೃಷ್ಣ, ಮುಖ್ಯಪ್ರಾಣರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಮಾಡಿಕೊಡಲು ಪರ್ಯಾಯ ಅದಮಾರು ಮಠದ ಶ್ರೀ ಈಶ ಪ್ರಿಯ ತೀರ್ಥ ಸ್ವಾಮೀಜಿ ನಿರ್ಧರಿಸಿದ್ದಾರೆ ಎಂದು ಮಠದ ವ್ಯವಸ್ಥಾಪಕರಾದ ಗೋವಿಂದ ರಾಜ್ ಹೇಳಿದ್ದಾರೆ.
ಭಕ್ತರು ಅಪರಾಹ್ನ 2 ರಿಂದ ಸಂಜೆ 6 ಗಂಟೆ ಯವರೆಗೆ ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗುವುದು.
ಭಕ್ತರು ಮಾಸ್ಕ್ ಧರಿಸಿ, ಸುರಕ್ಷತಾ ಅಂತರವನ್ನು ಕಾಪಾಡಿಕೊಂಡು ಶ್ರೀಕೃಷ್ಣ ದರ್ಶನ ಪಡೆದು ಕೊಳ್ಳಬೇಕು.
ಯಾರೂ ಒಳಗೆ ನಮಸ್ಕಾರ ಇತ್ಯಾದಿಯನ್ನು ಮಾಡದೇ ಸಹಕರಿಸಿ, ಎಲ್ಲರಿಗೂ ಶ್ರೀಕೃಷ್ಣನ ದರ್ಶನ ಲಭಿಸುವಂತಾಗಲಿ ಎಂದು ಶ್ರೀ ಈಶ ಪ್ರಿಯ ತೀರ್ಥರು ಆಶಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದರಿಂದ ಸುಮಾರು ಮೂರು ತಿಂಗಳ ಬಳಿಕ ಉಡುಪಿ ಶ್ರೀಕೃಷ್ಣ ಮಠ ಮತ್ತೆ ಭಕ್ತರಿಗಾಗಿ ತೆರೆದುಕೊಳ್ಳಲಿದೆ.
2022ರಲ್ಲಿ ನಡೆಯುವ ಶ್ರೀಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥರ ಪರ್ಯಾಯದ ಪೂರ್ವಭಾವಿ ಸಿದ್ಧತೆಗಳಲ್ಲಿ ಮೂರನೇಯದಾದ ಕಟ್ಟಿಗೆ ಮುಹೂರ್ತ ರವಿ ವಾರ ಬೆಳಗ್ಗೆ 8:45ಕ್ಕೆ ಕೃಷ್ಣಾಪುರ ಮಠದ ವತಿ ಯಿಂದ ನಡೆಯಲಿದೆ ಎಂದು ಮಠದ ಪ್ರಕಟನೆಯಲ್ಲಿ ತಿಳಿಸಿದೆ.