ಕರಾವಳಿ
ಉಡುಪಿ ; ಲಯನ್ಸ್ ಕ್ಲಬ್ ವನಮಹೋತ್ಸವ!

ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ಅಂಬಾಗಿಲು ಎಲ್ವಿಪಿ ಅನುದಾನಿತ ಹಿ. ಪ್ರಾ. ಶಾಲೆಯಲ್ಲಿ ನಡೆಸಲಾಯಿತು. ಲಯನ್ಸ್ ಅಧ್ಯಕ್ಷ ಡಯಾನ ಎಂ. ವಿಠಲ್ ಪೈ ಅವರು ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿ ಪಿ. ವಿಷ್ಣುದಾಸ್ ಪಾಟೀಲ್ ಅಂಬಾಗಿಲು, ದ್ವಿತೀಯ ಉಪ ಜಿಲ್ಲಾ ಗವರ್ನರ್ ನೇರಿ ಕರ್ನೇಲಿಯೊ, ವಲಯ ಕಾರ್ಯದರ್ಶಿ ಅಲೆವೂರು ದಿನೇಶ್ ಕಿಣಿ, ಲಯನ್ ಟೇಮರ್ ಎಸ್.ಟಿ. ಕುಂದರ್, ನಿರ್ದೇಶಕರುಗಳಾದ ರವಿರಾಜ್ ಯು.ಎಸ್., ಲೂಯಿಸ್ ಲೋಬೊ, ಸಹಾಯಕ ಶಿಕ್ಷಕಿ ಶ್ಯಾಮಲಾ ಮತ್ತಿತರರು ಉಪಸ್ಥಿತರಿದ್ದರು .