
ಕಾಪು ಮಹಾಶಕ್ತಿ ಕೇಂದ್ರದ ಕಾಪು ಪೇಟೆ 10 ನೇ ವಾರ್ಡ್ ನಲ್ಲಿ ವಾರ್ಡ್ ಸಭೆ, ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ಇವರ ಬಲಿದಾನ್ ದಿನ ಸ್ಮರಣೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ವಾರ್ಡ್ ಅಧ್ಯಕ್ಷರು ಸುಧಾಕರ್ ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ಕಾಪು ಮಹಾದೇವಿ ಹೈಸ್ಕೂಲ್ ಇಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಇವರ ಬಲಿದಾನದ ಬಗ್ಗೆ,ಹೋರಾಟದ ಬಗ್ಗೆ, ಪಕ್ಷ ಸಂಘಟನೆ ಬಗ್ಗೆ, ಪುರ ಸಭಾ ಚುನಾವಣೆ ಬಗ್ಗೆ ವಿಸ್ತಾರವಾಗಿ ಮಂಡಲ ಅಧ್ಯಕ್ಷರು ಅದ ಶ್ರೀಕಾಂತ್ ನಾಯಕ್ ಇವರು ಸಭೆಯಲ್ಲಿ ಮಾತನಾಡಿದರು.
ಈ ಸಭೆಯಲ್ಲಿ ಕಾಪು ಮಹಾ ಶಕ್ತಿಕೇಂದ್ರ ಅಧ್ಯಕ್ಷರು ಅದ ಸಂದೀಪ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾದ ಶೈಲೇಶ್ ಅಮೀನ್, ಮಾಜಿ ಪುರಸಭಾ ಅಧ್ಯಕ್ಷರು ಅದ ಅನಿಲ್ ಕುಮಾರ್, ಮಾಜಿ ಪುರಸಭಾ ಸದಸ್ಯರು ಮತ್ತು ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರು ಆದ ಆದ ರಮಾ ಶೆಟ್ಟಿ, ಮಂಡಲ ಕಾರ್ಯದರ್ಶಿ ಮತ್ತು ಕಾಪು ಮಹಾಶಕ್ತಿ ಕೇಂದ್ರ ಉಸ್ತುವಾರಿ ಮಾಲಿನಿ ಶೆಟ್ಟಿ, ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಉಪಸ್ಥಿತರಿದ್ದರು. ಸಭೆಯ ನಂತರ ಕಾರ್ಯಕರ್ತರಿಗೆ ಗಿಡ ವಿತರಣೆ ಮಾಡಲಾಯಿತು.