ಕರಾವಳಿ
ಮೂಡುಬಿದ್ರೆ: ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಬಾಲಕಿಯೋರ್ವಳ ದುರ್ಮರಣ

ಮೂಡುಬಿದ್ರೆ: ಬಾಲಕಿಯೊಬ್ಬಳು ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಮೂಡುಬಿದಿರೆಯ ತೋಡಾರು ಸಮೀಪದ ಹಂಡೇಲಿನಲ್ಲಿ ನಡೆದಿದೆ.
ಹಂಡೇಲು ನಿವಾಸಿ ಅಬುಸ್ವಾಲಿಹ್ ಅವರ ಪುತ್ರಿ ಆಜ್ಮಾ ಘಾತಿಮಾ(5) ಮೃತಪಟ್ಟ ಬಾಲಕಿಯಾಗಿದ್ದಾಳೆ.
ಅಬುಸ್ವಾಲಿಹ್ ಅವರಿಗೆ ಅವಳಿ-ಜವಳಿ ಹೆಣ್ಣುಮಕ್ಕಳು. ಇಂದು ಅವರ ಅಜ್ಜ ಇಬ್ಬರೂ ಮಕ್ಕಳನ್ನು ಅಂಗಡಿಗೆ ಕರೆದುಕೊಂಡು ಹೋಗಿದ್ದಾರೆ. ಅಂಗಡಿಗೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ದೇವಿನಗರ ಕ್ರಾಸ್ ಎಂಬಲ್ಲಿ ಆಜ್ಮಾ ಅಜ್ಜನ ಕೈಬಿಡಿಸಿಕೊಂಡು ರಸ್ತೆಗೆ ಓಡಿ ಬಂದಿದ್ದಾಳೆ. ಈ ವೇಳೆ ಮಂಗಳೂರಿನಿಂದ ಬರುತ್ತಿದ್ದ ಕಾರು ಬಾಲಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಕಾರು ಚಾಲಕನ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.