ಕರಾವಳಿ
ಉಡುಪಿ: ಸರ್ಕಾರಿ ಅಧಿಕಾರಿ ಮನೆ ಮೇಲೆ ದಿಢೀರ್ ಎಸಿಬಿ ದಾಳಿ!

ಉಡುಪಿ: ಉಡುಪಿಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಅಧಿಕಾರಿ ಮನೆ ಮೇಲೆ ಬೆಳ್ಳಂಬೆಳಿಗ್ಗೆ ರೈಡ್ ನಡೆದಿದೆ.
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಇಇ ಕೃಷ್ಣ ಎಸ್ ಹೆಬ್ಸೂರು ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲೆ ಹಾಗೂ ಆಸ್ತಿ ಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ. ಉಡುಪಿಯ ದೊಡ್ಡಣಗುಡ್ಡೆಯಲ್ಲಿ ಕೃಷ್ಣ.ಎಸ್ ಹೆಬ್ಸೂರು ಮನೆ ಇದೆ. ಎಸಿಬಿ ಅಧಿಕಾರಿಗಳು ಸದ್ಯ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.