ಕರಾವಳಿ
ಮಂಗಳೂರು: ನಿಯಂತ್ರಣ ತಪ್ಪಿ ಪಂಪ್‌ವೆಲ್ ಮೇಲ್ಸೇತುವೆಯಿಂದ ಸರ್ವಿಸ್ ರಸ್ತೆಗೆ ಜಾರಿದ ಕಾರು

ಮಂಗಳೂರು : ಮಂಗಳೂರು ನಗರದ ಪಂಪ್‍ವೆಲ್ ಮೇಲ್ಸೇತುವೆಯಿಂದ ಚಾಲಕನ ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಗೆ ಕಾರೊಂದು ಜಾರಿದ ಘಟನೆ ನಡೆದಿದೆ. ಮಂಗಳೂರು ನಗರದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಸೇರಿದ ಕಾರು ಇದಾಗಿದೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರಿನ ಕಡೆಗೆ ಚಲಿಸುತ್ತಿದ್ದ ಈ ಕಾರಿಗೆ ಎದುರಿನಿಂದ ವೇಗವಾಗಿ ವಾಹನವೊಂದು ಬಂದಿತ್ತು. ಈ ವಾಹನದ ವೇಗಕ್ಕೆ ರಸ್ತೆಯಲ್ಲಿದ್ದ ಮಳೆಯ ನೀರು ವೈದ್ಯರ ಕಾರಿನ ಮುಂಭಾಗದ ಗ್ಲಾಸ್ ಮೇಲೆ ಚೆಲ್ಲಿದೆ. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಸರ್ವಿಸ್ ರಸ್ತೆಗೆ ಜಾರಿಕೊಂಡಿದೆ. ಕೆಳ ರಸ್ತೆಗೆ ಜಾರಿದ ಕಾರನ್ನು ಸ್ಥಳೀಯರ ಸಹಕಾರದೊಂದಿಗೆ ಪೊಲೀಸರು ಸಮತಟ್ಟಾದ ರಸ್ತೆಗೆ ತಳ್ಳಿ ನಿಲ್ಲಿಸಿದರು.
ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.