ರಾಜ್ಯ

ಮಧ್ಯಪ್ರದೇಶ: ಬಾಲಕಿ ರಕ್ಷಿಸಲು ಹೋಗಿ ಬಾವಿಗೆ ಜಾರಿದ 35 ಜನರು

ಭೋಪಾಲ್‌ : ಬಾವಿಗೆ ಬಿದ್ದಿದ್ದ ಮಗುವಿನ ರಕ್ಷಣೆಯ ವೇಳೆಯಲ್ಲಿ ಬಾವಿಯ ಮಣ್ಣು ಕುಸಿದ 2 ಮಂದಿ ಸಾವನ್ನಪ್ಪಿ. 11 ಮಂದಿ ನಾಪತ್ತೆಯಾಗಿರುವ ಭೀಕರ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ.

ವಿದಿಶಾ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಗಂಜ್‌ ಬಸೋದಾ ಎಂಬಲ್ಲಿ ಮಗವೊಂದು ಕಾಲು ಜಾರಿ ಬಾವಿಗೆ ಬಿದ್ದಿದೆ. ಈ ವೇಳೆಯಲ್ಲಿ ಸ್ಥಳೀಯರೇ ಸೇರಿಕೊಂಡು ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಕಾರ್ಯಾಚರಣೆಯ ವೇಳೆಯಲ್ಲಿ ಬಾವಿ ಕುಸಿದಿದೆ.

ಬಾವಿಯ ಸುತ್ತಲೂ ನಿಂತಿದ್ದ 35ಕ್ಕೂ ಅಧಿಕ ಮಂದಿ ಬಾವಿಗೆ ಬಿದ್ದಿದ್ದಾರೆ. ಈ ಪೈಕಿ 3 ಮಂದಿ ಸಾವನ್ನಪ್ಪಿರೋದು ದೃಢಪಟ್ಟಿದ್ದು, ಎನ್‌ಡಿಆರ್‌ಎಫ್‌ ಉಳಿದವರನ್ನು ರಕ್ಷಿಸುವ ಕಾರ್ಯವನ್ನು ಮಾಡಿದೆ. ಆದರೆ 11 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.

ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್‌ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಎನ್‌ಡಿಆರ್‌ಎಫ್‌ ಸಿಬ್ಬಂದಿ ಪೊಲೀಸರು ಹಾಗೂ ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker