ಕರಾವಳಿ
ಮೀನು ಹಿಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಬಲೆ ಕೈ ಕಾಲಿಗೆ ಸಿಲುಕಿ ಮೀನುಗಾರೋರ್ವರ ಸಾವು

ಮಂಗಳೂರು: ನಗರದ ಅಳಿವೆಬಾಗಿಲು ನದಿಯಲ್ಲಿ ಮೀನುಗಾರರೊಬ್ಬರು ಬಲೆ ಹಾಕಿ ಮೀನು ಹಿಡಿಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ.
ತೋಟಬೆಂಗ್ರೆ ನಿವಾಸಿ ಜಯ ಪುತ್ರನ್ (55) ಮೃತ ಮೀನುಗಾರ ಎಂದು ತಿಳಿದುಬಂದಿದೆ.
ಇವರು ಅಳಿವೆಬಾಗಿಲಿನ ಸಮೀಪ ಮೀನು ಹಿಡಿಯುತ್ತಿದ್ದ ವೇಳೆ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದೆ. ಈ ವೇಳೆ ಆಕಸ್ಮಿಕವಾಗಿ ಮೀನು ಹಿಡಿಯುವ ಬಲೆ ಕಾಲಿಗೆ ಸಿಲುಕಿದ್ದರಿಂದ ಈಜಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಎಷ್ಟೇ ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಮನೆಮಂದಿ ಹುಡುಕಾಡಿದಾಗ ಕಸಬ ಬೆಂಗ್ರೆ ಸಮೀಪ ಜಯ ಅವರ ಮೃತದೇಹ ಪತ್ತೆಯಾಯಿತು . ಪತ್ನಿ,ಪುತ್ರ,ಪುತ್ರಿಯನ್ನು ಹೊಂದಿದ್ದು ಕುಟುಂಬಕ್ಕೆ ಇವರೇ ಜೀವನಾಧಾರವಾಗಿದ್ದರು.
ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.