
ಕೋರೋನಾ ಸಂದಿಗ್ಧತೆಯಿಂದಾಗಿ 2020-21ನೇ ಸಾಲಿನ ತಿರುಗಾಟದಲ್ಲಿ ಭಾಗಶಃ ಸಂಭಾವನೆ ಪಡೆದ 20 ಮೇಳಗಳ 410 ಕಲಾವಿದರಿಗೆ ಮತ್ತು ಯಕ್ಷಶಿಕ್ಷಣದ ಗುರುಗಳ ಖಾತೆಗೆ ತಲಾ ರೂ. 2,500/- ಮೊತ್ತದ ಧನಸಹಾಯ ವಿತರಣಾ ಕಾರ್ಯಕ್ರಮ ಇಂದು ದಿನಾಂಕ 16-07-2021 ರಂದು ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ನಡೆಯಿತು. ಶಾಸಕರಾದ ಶ್ರೀ ಕೆ. ರಘುಪತಿ ರವರು ಭಾಗವಹಿಸಿ ಸಹಾಯ ಧನವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶ್ರೀ ಪಣಂಬೂರು ವಾಸುದೇವ ಐತಾಳ್, ಸಿ.ಎ. ಗಣೇಶ್ ಕಾಂಚನ್, ಯಕ್ಷಗಾನ ಕಲಾರಂಗ (ರಿ.) ಉಡುಪಿ ಅಧ್ಯಕ್ಷರಾದ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.