ರಾಷ್ಟ್ರೀಯ

ಅಯೋಧ್ಯೆಯ ರಾಮಮಂದಿರ ಗರ್ಭಗುಡಿ ಕಾಮಗಾರಿ 2023 ರ ಒಳಗೆ ಪೂರ್ಣಗೊಳ್ಳಲಿದೆ

ಅಯೋಧ್ಯೆ, ಜುಲೈ 17: ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿ ಕಾಮಗಾರಿ ೨೦೨೩ ರ ಒಳಗೆ ಪೂರ್ಣಗೊಳ್ಳಲಿದ್ದು, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಿರುವುದಾಗಿ ತಿಳಿದುಬಂದಿದೆ. ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣನ ವಿಗ್ರಹಗಳ ದರ್ಶನ ಸಿಗಲಿದೆ.

೨೦೨೪ ರಲ್ಲಿ ಇಡೀ ದೇಗುಲದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಯೋಜನೆ ಮೇಲ್ವಿಚಾರಣೆ ವಹಿಸಿರುವ ಟ್ರಸ್ಟ್‌ ಪದಾಧಿಕಾರಿಗಳು ತಿಳಿಸಿದ್ದಾರೆ. ೨೦೨೩ ರ ಒಳಗೆ ರಾಮ್‌ಲಲ್ಲಾ ದರ್ಶನ ಪಡೆಯಲು ಭಕ್ತರಿಗೆ ರಾಮ ಮಂದಿರದ ಗರ್ಭಗುಡಿ ತೆರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ .

ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹದಿನೈದು ಸದಸ್ಯರು ಹಾಗೂ ಮಂದಿರ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಇಂಜಿನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳೊಂದಿಗೆ 2 ದಿನಗಳ ಸಭೆ ನಡೆಸಿದ್ದು, ಆನಂತರ ಭಕ್ತರಿಗೆ ದರ್ಶನ ಅವಕಾಶ ಕಲ್ಪಿಸುವ ಕುರಿತು ನಿರ್ಧಾರ ಕೈಗೊಂಡಿರುವುದಾಗಿ ಟ್ರಸ್ಟ್‌ ಮುಖ್ಯಸ್ಥ ನೃಪೇಂದ್ ಮಿಶ್ರಾ ಹೇಳಿದ್ದಾರೆ .

೨೦೨೦ರ ಆಗಸ್ಟ್‌ ೫ ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರದ ಶಿಲಾನ್ಯಾಸ ಹಾಗೂ ಭೂಮಿ ಪೂಜೆ ನೆರವೇರಿಸಿದ್ದರು. ಮಂದಿರದ ಕಾಮಗಾರಿ ನಡೆಯುತ್ತಿದ್ದು, ಸದ್ಯ ದೇವಾಲಯದ ಅಡಿಪಾಯದ ಕೆಲಸ ನಡೆಯುತ್ತಿದೆ. ಸೆಪ್ಟೆಂಬರ್ ೧೫ ರ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ದೀಪಾವಳಿ ಹಬ್ಬದ ಬಳಿಕ ಎರಡನೇ ಹಂತದ ಕಾಮಗಾರಿ ಆರಂಭಿಸುವ ಸಾಧ್ಯತೆಯಿದೆ. ಇನ್ನೆರಡು ವರ್ಷಗಳಲ್ಲಿ ದೇಗುಲದ ಪ್ರಮುಖ ಕಾರ್ಯ ಮುಗಿಯಲಿದ್ದು, ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker