ಟೋಕಿಯೋ ಒಲಿಂಪಿಕ್ಸ್ ಆರಂಭಕ್ಕೂ ಮೊದಲೇ ಆಘಾತ.! ಕ್ರೀಡಾ ಗ್ರಾಮದಲ್ಲಿ ಸೋಂಕು ಪತ್ತೆ!
ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗಲೇ ಕ್ರೀಡಾ ಗ್ರಾಮದಲ್ಲಿ ಕೋವಿಡ್-19 ಪ್ರಕರಣವೊಂದು ಪತ್ತೆ ಆಗಿದೆ. ವಿಶ್ವದ ಅತ್ಯುನ್ನತ ಕ್ರೀಡಾಕೂಟದ ಸಿದ್ದತೆ ಅಂತಿಮ ಹಂತದಲ್ಲಿ ಇರವಾಗಲೇ ಕರೊನಾ ವೈರಸ್ ಸೋಂಕು ತಗುಲಿರುವ ಸುದ್ದಿಎಲ್ಲರಿಗೂ ಆತಂಕ ಮೂಡಿಸಿದೆ.
ಜಾಗತಿಕವಾಗಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್‌ನ್ನು ಒಂದು ವರ್ಷಗಳ ಮುಂದೂಡಿಕೆ ಮಾಡಲಾಗಿತ್ತು. ಆದ್ರೀಗ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಲೇ ಮತ್ತೆ ಒಲಿಂಪಿಕ್ಸ್ ಆಯೋಜನೆ ಮಾಡಲಾಗುತ್ತಿದೆ. ಜುಲೈ 23ರಿಂದ ಅಗಸ್ಟ್ 8ರ ವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲೀಗ ವಿಶ್ವದ ಕ್ರೀಡಾಪಟುಗಳು ಒಂಲಿಂಪಿಕ್ಸ್ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಇದೀಗ ಟೋಕಿಯೊ 2020 ಒಲಿಂಪಿಕ್ ಕ್ರೀಡಾಪಟುಗಳ ಗ್ರಾಮದಲ್ಲಿ ಕೋವಿಡ್ -19 ಪ್ರಕರಣ ಪತ್ತೆಯಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ
ನರಿಟಾ ವಿಮಾನ ನಿಲ್ದಾಣದಲ್ಲಿ ಕ್ರೀಡಾಪಟುಗಳನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ವೇಳೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ನೈಜೀರಿಯನ್ ಒಲಿಂಪಿಕ್ಸ್ ನಿಯೋಗದ ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ಟೋಕಿಯೊ ಸಂಘಟನಾ ಸಮಿತಿಯ ವಕ್ತಾರ ಮಾಸಾ ಟಕಯಾ ತಿಳಿಸಿದ್ದಾರೆ.
ತಜ್ಞರು ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಒಲಿಂಪಿಕ್ಸ್ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿ ದ್ದಾರೆ. ಆದರೂ ಕೂಡ ಒಲಿಂಪಿಕ್ಸ್ ಆಯೋಜಿಸಲಾಗಿದೆ. ಇದೀಗ ಕ್ರೀಡಾಕೂಟ ಆರಂಭಕ್ಕೂ ಮುನ್ನವೇ ಕೊರೊನಾ ತನ್ನ ಆಟವನ್ನು ಆರಂಭಿಸಿದೆ. ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್‌ನಲ್ಲಿ ಮಾಧ್ಯಮಗಳು, ಪ್ರಸಾರಕರು, ಅಧಿಕಾರಿಗಳು ಮತ್ತು ನ್ಯಾಯಾಧೀಶರು ಮತ್ತು ಇತರರು ಸೇರಿದಂತೆ 15,400 ಕ್ರೀಡಾಪಟು ಗಳು ಮತ್ತು ಸಾವಿರಾರು ಮಂದಿ ಜಪಾನ್‌ಗೆ ಆಗಮಿಸಲಿದ್ದಾರೆ.