ರಾಜ್ಯ

ಮಹಾರಾಷ್ಟ್ರದಲ್ಲಿ ಹೆಲಿಕಾಪ್ಟರ್ ಪತನ ಪೈಲಟ್ ಸಾವು!

ಮುಂಬೈ: ಮಹಾರಾಷ್ಟ್ರದ ಜಲಗಾವ್​ ಪಟ್ಟಣದಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದು ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ.

ಜಲಗಾವ್ ಜಿಲ್ಲೆಯ ಚೊಪ್ರಾ ತಾಲ್ಲೂಕಿನ ವರ್ಡಿ ಶಿವಾರಾ ಸಮೀಪ ಅಪಘಾತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಓರ್ವ ಪೈಲಟ್ ಮೃತಪಟ್ಟಿದ್ದಾರೆ. ಮತ್ತೋರ್ವ ಮಹಿಳಾ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಪೈಲಟ್​ ಹೆಸರು ಅಂಶಿಕಾ ಗುರ್ಜರ್​ ಎಂದು ತಿಳಿದುಬಂದಿದೆ.ತಹಶೀಲ್ದಾರ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಹೆಲಿಕಾಪ್ಟರ್​ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ. ಹೆಲಿಕಾಪ್ಟರ್​ ಪತನಗೊಳ್ಳಲು ಏನು ಕಾರಣ ಎಂಬುದು ನಿಖರವಾಗಿ ಪತ್ತೆಯಾಗಿಲ್ಲ. ಸ್ಥಳೀಯ ಬುಡಕಟ್ಟು ಜನರು ಗಾಯಾಳು ಮಹಿಳಾ ಪೈಲಟ್​ ಅವರಿಗೆ ಆರೈಕೆ ಮಾಡಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!