ಮಳೆಗಾಲದಲ್ಲಿ ಆರೋಗ್ಯ ಚೆನ್ನಾಗಿರಲು ಯಾವ ಆಹಾರವನ್ನು ಸೇವಿಸಬೇಕು ? ಯಾವುದನ್ನು ಸೇವಿಸಬಾರದು ? ತಿಳಿದುಕೊಳ್ಳಿ !!
ದೇಶದೆಲ್ಲೆಡೆ ಮುಂಗಾರು ಚುರುಕುಗೊಂಡಿದೆ. ಈ ತಂಪಿನ ವಾತಾವರಣವು ಮನಸ್ಸಿಗೆ ಎಷ್ಡು ಮುದ ನೀಡುವುದೋ, ಆರೋಗ್ಯದ ಮೇಲೆ ಅಷ್ಟೇ ಪರಿಣಾಮ ಬೀರುವುದು. ಅದಕ್ಕಾಗಿ ಈ ಮಳೆಗಾಲದಲ್ಲಿ ಆಹಾರ ಸೇವಿಸುವಾಗ ತುಂಬಾ ಜಾಗರೂಕರಾಗಿರಬೇಕು. ಆಹಾರ ಸೋಂಕುಗಳಿಂದ ಹಿಡಿದು ಸೊಳ್ಳೆಯಿಂದ ಹರಡುವ ರೋಗಗಳವರೆಗೆ, ಮಳೆಗಾಲವು ಹಲವಾರು ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ ಸಮತೋಲಿತ ಆಹಾರ ಸೇವಿಸುವುದು ತುಂಬಾ ಮುಖ್ಯ. ಮಳೆಗಾಲದಲ್ಲಿ ಯಾವ ಆಹಾರ ಸೇವಿಸಬೇಕು ಹಾಗೂ ಯಾವುದನ್ನು ತಪ್ಪಿಸಬೇಕು ಎಂಬುದನ್ನು ಇಲ್ಲಿ ತಿಳಿಸಿದೆ .
ಶುದ್ಧ ನೀರು ಕುಡಿಯಿರಿ: ಕೆಲವು ಮನೆಗಳಲ್ಲಿ, ಜನರು ಟ್ಯಾಪ್ ಮತ್ತು ಬೋರ್‌ವೆಲ್ ಬಂದ ನೀರನ್ನು ನೇರವಾಗಿ ಕುಡಿಯುತ್ತಾರೆ. ಇದು ಒಳ್ಳೆಯದಲ್ಲ. ಮಳೆಗಾಲದಲ್ಲಿ ನೀರು ಸೂಕ್ಷ್ಮಜೀವಿಗಳಿಂದ ಸುಲಭವಾಗಿ ಕಲುಷಿತಗೊಳ್ಳಬಹುದು. ಈ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಸೋಂಕು, ಅತಿಸಾರ ಅಥವಾ ಟೈಫಾಯಿಡ್ ಉಂಟಾಗುತ್ತದೆ. ಆದ್ದರಿಂದ ಅಂತಹ ನೀರನ್ನು ಚೆನ್ನಾಗಿ ಕುದಿಸಿ ಕುಡಿಯಿರಿ
ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಡಿ: ನಾವೆಲ್ಲರೂ ಮಳೆಯಲ್ಲಿ ಬಿಸಿಬಿಸಿ ಪಕೋಡ ಮತ್ತು ಸಮೋಸಾಗಳನ್ನು ಆನಂದಿಸುತ್ತೇವೆ. ಆದರೆ ಈ ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ತಿಂಡಿಗಳು ನಿಮ್ಮನ್ನು ಉಬ್ಬಿಸಲು ಕಾರಣವಾಗುವುದು. ಮಳೆಗಾಲದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿದೆ ಏಕೆಂದರೆ ಅತಿಯಾದ ತೇವಾಂಶವು ನಮ್ಮ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ನಮ್ಮ ಹೊಟ್ಟೆಗೆ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ
ಮಸಾಲ ಟೀ ಕುಡಿಯಿರಿ: ನಮ್ಮ ದೇಹವು ಮಳೆಗಾಲದಲ್ಲಿ ತೇವಾಂಶದ ಕಾರಣ ನೀರು ಕುಡಿಯಲು ಹೋಗುವುದೇ ಇಲ್ಲ. ಇದರಿಂದ ದೇಹದಲ್ಲಿನ ತೇವಾಂಶ ಕಡಿಮೆಯಾಗುವುದು. ಅದಕ್ಕಾಗಿ ನೀರು ಸಾಕಷ್ಟು ನೀರು ಮತ್ತು ಮಸಾಲೆ ಟೀ ಗಳನ್ನು ಕುಡಿಯಬೇಕು. ತುಳಸಿ, ಶುಂಠಿ, ಏಲಕ್ಕಿ ಮುಂತಾದ ಮಸಾಲೆಗಳೊಂದಿಗೆ ತಯಾರಿಸಿದ ಗಿಡಮೂಲಿಕೆಗಳ ಮಿಶ್ರಣ ಅಥವಾ ಮಸಾಲಾ ಟೀ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಎಲ್ಲಾ ರೀತಿಯ ಸೋಂಕನ್ನು ತಡೆಯುತ್ತದೆ
ಬೇಯಿಸಿದ ಆಹಾರವನ್ನು ಮಾತ್ರ ಸೇವಿಸಿ: ಸಲಾಡ್ ಗಳು ಆರೋಗ್ಯಕರ ಮತ್ತು ಪೌಷ್ಠಿಕಾಂಶವನ್ನು ಹೊಂದಿದ್ದರೂ, ಮಳೆಗಾಲದಲ್ಲಿ ಹಸಿ ತರಕಾರಿಗಳನ್ನು ಸೇವಿಸುವುದು ಆರೋಗ್ಯ ಸಮಸ್ಯೆಗಳಿಗೆ ಆಹ್ವಾನವಾಗಬಹುದು. ಕೆಲವು ತರಕಾರಿಗಳು ಧೂಳಿನಿಂದಾಗಿ ಹೆಚ್ಚಿನ ಪ್ರಮಾಣದ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತವೆ, ಇದು ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಹಸಿ ಸಲಾಡ್ ಗಳಿಗೆ ಬದಲಾಗಿ, ಬೇಯಿಸಿದ ಆಹಾರ ಅಥವಾ ತರಕಾರಿಗಳನ್ನು ಸೇವಿಸಿ.