ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಕಡೆಕಾರ್ ಗ್ರಾಮದಲ್ಲಿ 140 ಎಕರೆ ಹಡಿಲು ಭೂಮಿ ಕೃಷಿ ಕಡೇ ನಟ್ಟಿ (ಸಮಾರೋಪ)

ರಾಷ್ಟ್ರದ ಗಮನ ಸೆಳೆದ “ಹಡಿಲು ಭೂಮಿ ಕೃಷಿ ಆಂದೋಲನ”ದಡಿ ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 140 ಎಕರೆ ಹಡಿಲು ಭೂಮಿ ಕೃಷಿ ನಾಟಿ ಕಾರ್ಯ ನಡೆಯುತ್ತಿದ್ದು, ಇಂದು ದಿನಾಂಕ 18-07-2021 ರಂದು ಕಡೆ ನಟ್ಟಿ (ಸಮಾರೋಪ) ಶಾಸಕ ಶ್ರೀ ಕೆ ರಘುಪತಿ ಭಟ್ ನೇತೃತ್ವದಲ್ಲಿ ಸಾಮಾಜಿಕ ಕ್ಷೇತ್ರದ ಗಣ್ಯರ ಕೂಡುವಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹಡಿಲು ಭೂಮಿ ಕೃಷಿಗೆ ಸಹಕರಿಸಿದ ಹಿರಿಯ ಕೃಷಿಕರಾದ ಬೊಗ್ಗು ಕಡೆಕಾರ್ ಮತ್ತು ಜಗದೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಸ್ಥಾಪಕಾಧ್ಯಕ್ಷರು, ಎಂ.ಆರ್.ಜಿ ಗ್ರೂಪ್, ಶ್ರೀ ಲಾಲಾಜಿ ಆರ್. ಮೆಂಡನ್ ಶಾಸಕರು ಕಾಪು ವಿಧಾನಸಭಾ ಕ್ಷೇತ್ರ, ಶ್ರೀ ರಕ್ಷಿತ್ ಶೆಟ್ಟಿ ಚಲನಚಿತ್ರ ನಟ ಇವರೊಂದಿಗೆ ಶಾಸಕ ಶ್ರೀ ಕೆ ರಘುಪತಿ ಭಟ್ ರವರು ನೇಜಿ ನೀಡುವ ಮೂಲಕ ಕಡೆಕಾರ್ ಗ್ರಾಮದ ಕಡೆ ದಿನದ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ವಿಜಯ ಬ್ಯಾಂಕ್ ನ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರಾದ ರತ್ನಾಕರ್ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ, ಸದಸ್ಯರಾದ ಮಹೇಶ್ ಠಾಕೂರ್, ರಕ್ಷಿತ್ ಶೆಟ್ಟಿ ಅವರ ತಾಯಿ ರಂಜನಿ ಶೆಟ್ಟಿ, ಶಾಸಕರ ಮಗನಾದ ರೆಯ್ಯಾನ್ಶ್, ಸ್ಥಳೀಯರಾದ ರಿಕೇಶ್ ಉಪಸ್ಥಿತರಿದ್ದರು.