
ಮಂಗಳೂರು: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ಕಳವುಗೈದ ಘಟನೆ ನಗರದ ಕೋಡಿಕಲ್ ಆಲಗುಡ್ಡೆಯಲ್ಲಿ ನಡೆದಿದೆ.
ಕೋಡಿಕಲ್ ಆಲಗುಡ್ಡೆಯ ನಿವಾಸಿ ಅರುಣ್ ಕುಮಾರ್ ಎಂಬವರು ಮನೆಗೆ ಬೀಗ ಹಾಕಿ ಪತ್ನಿ ಮತ್ತು ಪುತ್ರಿಯೊಂದಿಗೆ ನಗರಕ್ಕೆ ಹೋಗಿದ್ದರು. ಮನೆಗೆ ವಾಪಸಾದಾಗ ಮನೆಯ ಬಾಗಿಲಿನ ಚಿಲಕದ ಕೊಂಡಿಯನ್ನು ಮುರಿದಿರುವುದು ಕಂಡುಬಂದಿದೆ. ತಕ್ಷಣವೇ ಒಳಗೆ ಹೋಗಿ ನೋಡಿದಾಗ ಕಬ್ಬಿಣದ ಕಪಾಟುಗಳನ್ನು ಒಡೆದು ಅದರಲ್ಲಿದ್ದ ಲಾಕರ್‌ನ್ನು ಒಡೆದಿದ್ದು, ಸುಮಾರು ೧೪ ಲಕ್ಷ ರೂ. ಬೆಲೆಬಾಳುವ ೩೬೦ ಗ್ರಾಂ ಚಿನ್ನಾಭರಣ ಹಾಗೂ ಹಾಗೂ ೧೭೦೦ ರೂ. ನಗದು ಕಳವಾಗಿದೆ ಎಂದು ಅಂದಾಜಿಸಲಾಗಿದೆ. ಈ ಘಟನೆಯ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.