ಭಾರತದ ಹೆಬ್ಬಾಗಿಲಿನಲ್ಲಿ ತಾಲಿಬಾನಿಗಳ ಅಟ್ಟಹಾಸ.!!

ನವದೆಹಲಿ: ಅಪಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂತೆಗೆತದ ಬಳಿಕ ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಭಾರತದ ಭದ್ರತೆಯ ಮೇಲೆ ನೇರ ಪರಿಣಾಮ ಬೀರಲಿವೆ. ಭಾರತದ ರಕ್ಷಣಾ ಪರಿಣಿತರು ಈ ಆತಂಕ ವ್ಯಕ್ತಪಡಿಸಿಸಿದ್ದಾರೆ.
ಅಪ್ಘಾನಿಸ್ತಾನದಲ್ಲಿ ಆಡಳಿತ ಬಿಗಿಗೊಳಿಸಿದ ಬಳಿಕ ಎಲ್ಲವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ತಾಲಿಬಾನ್ ಉಗ್ರರು ಪಾಕಿಸ್ತಾನ ಸೇನೆಯಲ್ಲಿರುವ ಪುಂಡರೊಂದಿಗೆ ಕೈ ಜೋಡಿಸುವ ಸಾಧ್ಯತೆ ಇದೆ.
ಪುಂಡರು ಅಂದರೆ ಸೈನಿಕರಲ್ಲದಿದ್ದರೂ ಸೇನಾ ತರಬೇತಿ ಪಡ಼ೆದ ದುಷ್ಕರ್ಮಿಗಳಾಗಿದ್ದಾರೆ. ಬಳಿಕ ಈ ಪುಂಡರು ತಾಲಿಬಾನ್ ಗಳು ಕಾಶ್ಮೀರಕ್ಕೆ ನುಸುಳುವ ಸಾಧ್ಯತೆ ಇದೆ. ಇದು ಭಾರತದ ಭದ್ರತೆಗೆ ಅಪಾಯ ತಂದೊಡ್ಡಲಿದೆ.
ಈ ಹಿನ್ನೆಲೆಯಲ್ಲಿ ಭಾರತ ಅಪ್ಘಾನಿಸ್ತಾನದ ಬೆಳವಣಿಗೆಯನ್ನು ನಿಕಟವಾಗಿ ಅವಲೋಕಿಸುತ್ತಿದೆ. 20 ವರ್ಷಗಳ ಅಮೆರಿಕ ಸೇನೆಯ. ಕಾರ್ಯಾಚರಣೆ ಬಳಿಕ ಕೂಡ ತಾಲಿಬಾನಿಗಳ ಶಕ್ತಿ ಕಡಿಮೆಯಾಗಿಲ್ಲ. ಅತ್ಯಾಧುನಿಕ ಶಸ್ತಾಸ್ತ್ರಗಳು ಅದರ ಬತ್ತಳಿಕೆಯಲ್ಲಿ ಇವೆ.
ಪಾಕ್ ಬೆಂಬಲಿತ ಉಗ್ರರು ಕೂಡ ಈ ತಾಲಿಬಾನ್ ಗಳ ಜತೆ ಕೈ ಜೋಡಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಮುಂದಿನ ಆರು ತಿಂಗಳು ಭಾರತದ ಪಾಲಿಗೆ ನಿರ್ಣಾಯಕವಾಗಿದೆ.