
ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕಿನ 11 ಕುಟುಂಬಗಳಿಗೆ ಇಂದು ದಿನಾಂಕ 19-07-2021 ರಂದು ಬ್ರಹ್ಮಾವರ ಶಾಸಕರ ಕಚೇರಿಯಲ್ಲಿ ಪರಿಹಾರ ಧನದ ಚೆಕ್ ಶಾಸಕ ಶ್ರೀ ಕೆ. ರಘುಪತಿ ಭಟ್ ವಿತರಿಸಿದರು.
ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮ ಬಚ್ಚಿ ಶೆಡ್ತಿ ಅವರಿಗೆ ರೂ. 60,000/, ಜಯಲಕ್ಷ್ಮೀ ಮಡಿವಾಳ್ತಿ ಅವರಿಗೆ ರೂ. 60,000/, ಹಂದಾಡಿ ಗ್ರಾಮದ ಸುಗುಣ ಅವರಿಗೆ 58,962/, ಹಾವಂಜೆ ಗ್ರಾಮದ ಜನಾರ್ದನ ಆಚಾರ್ಯ ಅವರಿಗೆ ರೂ. 45,000/, ಹಾರಾಡಿ ಗ್ರಾಮದ ಅಹಮ್ಮದ್ ಸಾಹೇಬ್ ಅವರಿಗೆ ರೂ. 40,000/, ಹೇರೂರು ಗ್ರಾಮದ ರುದ್ರಮ್ಮ ಶೆಡ್ತಿ ಅವರಿಗೆ 30,000/, ಸೂರಪ್ಪ ಮರಕಾಲ ಅವರಿಗೆ ರೂ. 30,000/, ನೀಲಾವರ ಗ್ರಾಮದ ಸೀತು ದೇವಾಡಿಗ ಅವರಿಗೆ ರೂ. 30,000/, ಶರಾವತಿ ಅವರಿಗೆ ರೂ. 24,726/, ನಾಗರತ್ನ ಅವರಿಗೆ ರೂ. 24,726/, ಬೈಕಾಡಿ ಗ್ರಾಮದ ಗುಲಾಬಿ ಅವರಿಗೆ ರೂ. 20,000/ ಸೇರಿದಂತೆ ಒಟ್ಟು ರೂ. 4,23,414 ಮೊತ್ತದ ಚೆಕ್ ಶಾಸಕ ಶ್ರೀ ಕೆ. ರಘುಪತಿ ಭಟ್ ರವರ ಶಿಫಾರಸಿನ ಮೇರೆಗೆ ಮಂಜೂರಾಗಿರುತ್ತದೆ.
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್, ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಹೇರೂರು, ಕೋಶಾಧಿಕಾರಿಗಳಾದ ಉದಯ್ ಕಾಮತ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪ್ರತಾಪ್ ಹೆಗ್ಡೆ ಮಾರಾಳಿ, ಬ್ರಹ್ಮಾವರ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸುಧೀರ್ ಶೆಟ್ಟಿ, ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೀರಾ ಸದಾನಂದ ಪೂಜಾರಿ, ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಂದ್ರ ಕುಮಾರ್, ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ್ ಪೂಜಾರಿ, ಹಾವಂಜೆ ಗ್ರಾಮ ಪಂಚಾಯತ್ ಸದಸ್ಯರಾದ ಉದಯ್ ಕೋಟ್ಯಾನ್ ಹಾಗೂ ಬ್ರಹ್ಮಾವರ ತಹಶೀಲ್ದಾರರಾದ ರಾಜಶೇಖರ್, ಕಂದಾಯ ನಿರೀಕ್ಷಕರಾದ ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು.