
ಉಡುಪಿ: ಬೈಕ್ ನಲ್ಲಿ ಸಂಚಾರಿಸುತ್ತಿದ್ದಾಗ ರಸ್ತೆಯಲ್ಲಿ ನವಿಲು ಇದ್ದಕ್ಕಿದ್ದಂತೆ ಮುಂದೆ ಹಾರಿಹೋದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನಪ್ಪಿದ ಘಟನೆ ಪಡುಬಿದ್ರಿ ಹೆದ್ದಾರಿಯ ಎರ್ಮಾಳ್ ಎಂಬಲ್ಲಿ ಈ ದುರ್ಘಟನೆ ನಡೆದಿದೆ.
ಮೃತ ಯುವಕ ಬೆಳಪು ಪ್ರಸಾದ ನಗರ ನಿವಾಸಿ ಅಬ್ದುಲ್ (25) ಎಂದು ಗುರುತಿಸಲಾಗಿದೆ. ಪಡುಬಿದ್ರಿ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಇವರು, ಪಡುಬಿದ್ರಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸ್ಕೂಟರ್ ಸವಾರಿ ಮಾಡಿಕೊಂಡು ಉಚ್ಚಿಲ ಕಡೆಗೆ ಬರುತ್ತಿದ್ದ ವೇಳೆ ನವಿಲೊಂದು ಹಾರಿಕೊಂಡು ಬಂದು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಅಬ್ದುಲ್ ಜೀವನ್ಮರಣ ಹೋರಾಟದಲ್ಲಿದ್ದು, ಆಂಬ್ಯುಲೆನ್ಸ್ ಬರಲು ವಿಳಂಬವಾದ ಹಿನ್ನೆಲೆ ಸ್ಥಳೀಯ ಕಾರ್ತಿಕ್ ಎಂಬ ಯುವಕ ತನ್ನ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದರಾದರೂ ಅಷ್ಟರಲ್ಲೇ ಅವರು ಮೃತ ಪಟ್ಟಿದ್ದಾರೆ.