ಕರಾವಳಿ
ಮಂಗಳೂರು: ಜಿಲ್ಲಾಧಿಕಾರಿ ಕಚೇರಿಯ ಲಿಫ್ಟ್ ನೊಳಗೆ ಸಿಲುಕಿಕೊಂಡ ಮಹಿಳೆ!

ಮಂಗಳೂರು : ಜಿಲ್ಲಾಧಿಕಾರಿ ಕಚೇರಿಯ ಲಿಫ್ಟ್ ಬಾಗಿಲು ಜಾಮ್ ಆಗಿ ಮಹಿಳೆಯೊಬ್ಬರು ಸಿಲುಕಿ ಹಾಕಿಕೊಂಡ ಘಟನೆ ಇಂದು ನಡೆದಿದೆ. ಲಿಫ್ಟ್ ಜಾಮ್ ಆದ ಕಾರಣ ಕಚೇರಿಯ ಕೆಲಸದ ಮಹಿಳೆ ಸುಮಾರು ೧೫ ನಿಮಿಷ ಕಾಲ ಲಿಫ್ಟ್ ನೊಳಗೆ ಬಾಕಿಯಾದರು. ಕೂಡಲೇ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದರು.