ಕರಾವಳಿ
ಸಾಧು ಪಾಣಾರಿಗೆ ಅಭಿನಂದನೆ

ಬಬ್ಬರ್ಯ ಯುವ ಸೇವಾ ಸಮಿತಿ ಉಡುಪಿ ಬಬ್ಬರ್ಯ ಕಟ್ಟೆ ಉಡುಪಿ ವತಿಯಿಂದ ಉಡುಪಿ ಜಿಲ್ಲೆಯ ಅಲೆವೂರು ಗ್ರಾಮದ ದೈವ ಚಾಕ್ರಿ ಯಲ್ಲಿ ಬಹಳ ಹೆಸರುವಾಸಿಯಾದ ಸಾಧು ಪಾಣಾರ ಅವರ ಮನೆಗೆ ಭೇಟಿ ಕೊಟ್ಟು ಅವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಆಹಾರ ಪ್ಯಾಕೇಜನ್ನು ಕೊಡಲಾಯಿತು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ವಿನೋದ್ ಶೆಟ್ಟಿ ಹಾಗೂ ಗಣಪತಿ ಕಾಮತ್ ಅಧ್ಯಕ್ಷರಾದ ವರದರಾಜ ಕಾಮತ್ ಹಾಗೂ ವಿಜ್ಞೇಶ್ ಆಚಾರ್ಯ ಹಾಗೂ ಸರ್ವ ಸದಸ್ಯರು ಉಪಸ್ಥಿತಿರಿದರು .