ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಬಂಧನ!!!

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಆಲ್ಬಂ, ಚಲನ ಚಿತ್ರ ಶೂಟಿಂಗ್ ಹಾಗೂ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ರಾಜ್ ಕುಂದ್ರಾ ಪೊರ್ನ್ ಚಿತ್ರಗಳನ್ನು ರಚಿಸಿ, ಕೆಲ ಮೊಬೈಲ್ ಆ್ಯಪ್ ಮೂಲಕ ಪ್ರಕಟಿಸುವ ಹಾಗೂ ಹಂಚಿಕೆ ಮಾಡುವ ಕುರಿತು ಕುಂದ್ರಾ ವಿರುದ್ಧ 2021ರ ಫೆಬ್ರವರಿ ತಿಂಗಳಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಮುಂಬೈ ಅಪರಾಧ ದಳ ಪೊಲೀಸರು ತನಿಖೆ ನಡೆಸಿದ್ದು, ಈ ವೇಳೆ ಕುಂದ್ರಾ ವಿರುದ್ಧ ಸಾಕಷ್ಟು ಪುರಾವೆಗಳು ಲಭ್ಯವಾಗಿದೆ.
45 ವರ್ಷದ ರಾಜ್ ಕುಂದ್ರಾ ನಟಿ ಶಿಲ್ಪಾ ಶೆಟ್ಟಿ ಅವರ ಜೊತೆ 2009ರಲ್ಲಿ ವಿವಾಹವಾಗಿದ್ದರು. ಇದು ಅವರಿಗೆ 2ನೇ ವಿವಾಹವಾಗಿತ್ತು. ಈ ದಂಪತಿಗೆ ವಿಹಾನ್ ರಾಜ್ ಎಂಬ 9 ವರ್ಷದ ಮಗನಿದ್ದಾರೆ. ವರ್ಷಗಳ ಹಿಂದೆ ಸರೋಗೆಸಿ ಮೂಲಕ ಸಮಿಷಾ ಎಂಬ ಹೆಣ್ಣು ಮಗುವನ್ನು ಈ ದಂಪತಿ ಪಡೆದುಕೊಂಡಿದ್ದಾರೆ. ಸದ್ಯ ರಾಜ್ ಕುಂದ್ರಾ ಮೇಲೆ ಇಂಥದ್ದೊಂದು ಆರೋಪ ಬಂದಿರುವುದು ಚಿತ್ರರಂಗದಲ್ಲಿ ದೊಡ್ಡ ಸಂಚಲವನ್ನು ಉಂಟು ಮಾಡಿದೆ.