ರಾಜ್ಯ

ಭಕ್ತನೋರ್ವ ತಿರುಪತಿ ತಿಮ್ಮಪ್ಪನಿಗೆ 4 ಕೋಟಿ ರೂ. ಮೌಲ್ಯದ ಚಿನ್ನದ ಖಡ್ಗ ಅರ್ಪಿಸಿದ್ದಾರೆ!!

ಹೈದ್ರಾಬಾದ್‍: ಇಲ್ಲಿನ ಭಕ್ತರೊಬ್ಬರು ತಿರುಪತಿ ತಿಮ್ಮಪ್ಪನಿಗೆ 4 ಕೋಟಿ ರೂ. ಮೌಲ್ಯದ ಚಿನ್ನದ ಖಡ್ಗ ನೀಡಿದ್ದಾರೆ.

ಹೈದರಾಬಾದ್‍ನ ಭಕ್ತ ಎಂ.ಶ್ರೀನಿವಾಸ್ ಪ್ರಸಾದ್ ಮತ್ತು ಅವರ ಪತ್ನಿ ವೆಂಕಟೇಶ್ವರ ಸ್ವಾಮಿಗೆ 4 ಕೋಟಿ ರೂಪಾಯಿ ಮೌಲ್ಯದ 6.5 ಕೆಜಿ ತೂಕದ ಚಿನ್ನದ ಖಡ್ಗವನ್ನು ದೇವರಿಗೆ ಅರ್ಪಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಅಧಿಕಾರಿಗಳು ಈ ಖಡ್ಗವನ್ನು ಸ್ವೀಕರಿಸಿದ್ದಾರೆ.

ಕೊಯಮತ್ತೂರಿನ ವಿಶೇಷ ಆಭರಣಕಾರರು ಆರುಬತಿಂಗಳ ಅವಧಿಯಲ್ಕಿಕ ಈ ಖಡ್ಗ ತಯಾರಿಸಿದ್ದಾರೆ.

ತಮಿಳುನಾಡಿನ ತೆನಿ ಮೂಲದ ಜವಳಿ ವ್ಯಾಪಾರಿ ತಂಗಾದೊರೈ ಅವರು 2018ರಲ್ಲಿ 1.75 ಕೋಟಿ ರೂ. ಬೆಲೆಬಾಳುವ ಚಿನ್ನದ ಕತ್ತಿಯನ್ನು ತಿರುಪತಿ‌ ವೆಂಕಟರಮಣನಿಗೆ ಅರ್ಪಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!