ರಾಜ್ಯ ದ್ವಿತೀಯ PUC ವಾರ್ಷಿಕ ಪರೀಕ್ಷೆ ವೇಳಾ ಪಟ್ಟಿ ಪ್ರಕಟ!!

ಬೆಂಗಳೂರು : ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಇಂದಿನ ದ್ವಿತೀಯ ಪಿಯುಸಿ ಫಲಿಂತಾಶ ತಿರಸ್ಕರಿಸಿರುವಂತಹ ವಿದ್ಯಾರ್ಥಿಗಳಿಗೆ ಆಗಸ್ಟ್ 19, 2021ರಿಂದ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ವೇಳಾ ಪಟ್ಟಿ ಪ್ರಕಟಿಸಿದೆ.
ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, 2020-21ನೇ ಸಾಲಿನ ದ್ವಿತೀಯ ಪಿಯುಸಿ ಘೋಷಿತ ಫಲಿತಾಂಶದಲ್ಲಿ ಏನಾದರೂ ವ್ಯತ್ಯಾಸಗಳಿದ್ದಲ್ಲಿ, ಪರೀಕ್ಷೆ ಬರೆಯಬೇಕೆಂದು ಬಯಸಿದ್ದಲ್ಲಿ ಜುಲೈ 26 ರೊಳಗೆ ಪೂರಕ ದಾಖಲೆಗಳನ್ನು ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಪ್ರಾಂಶುಪಾಲರೇ ಖುದ್ದಾಗಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಅಥವಾ ಪೋಷಕರನ್ನು ಕಛೇರಿಗೆ ಕಳುಹಿಸುವಂತಿಲ್ಲ.
ಜಿಲ್ಲಾ ಉಪ ನಿರ್ದೇಶಕರು ಈ ದಾಖಲೆಗಳನ್ನು ಕ್ರೂಢೀಕರಿಸಿ, ಕೇಂದ್ರ ಕಚೇರಿಗೆ ಜುಲೈ 28 ರ ಒಳಗೆ ತಲುಪಿಸುವಂತೆ ಸೂಚಿಸಲಾಗಿದೆ.
2020-21ನೇ ಸಾಲಿನ ತಾತ್ಕಾಲಿಕೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ
19-08-2021 – ಐಚ್ಛಿಕ ಕನ್ನಡ, ಗಣಿತ, ಬೇಸಿಕ್ ಮ್ಯಾಥ್ಸ್
21-08-2021- ಕನ್ನಡ
23-08-2021 – ಜಿಯಾಗ್ರಫಿ, ಸೈಕಾಲಜಿ, ಫಿಜಿಕ್ಸ್
24-08-2021 – ಇಂಗ್ಲೀಷ್
25-08-2021 – ಅಕೌಂಟೆನ್ಸಿ, ಜಿಯೋಲಜಿ, ಎಜುಕೇಷನ್, ಹೋಂ ಸೈನ್ಸ್
27-08-2021 – ಹಿಸ್ಟರಿ, ಸ್ಟಾಟಸ್ಟಿಕ್ಸ್
30-08-2021- ಎಕನಾಮಿಕ್ಸ್
31-08-2021 – ಉರ್ದು, ಸಂಸ್ಕೃತ
01-09-2021 – ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಸೋಷಿಯಾಲಜಿ, ಬಯೋಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
02-09-2021 – ಲಾಜಿಕ್, ಬ್ಯುಸಿನೆಸ್ ಸ್ಟಡೀಸ್, ಕೆಮಿಸ್ಟ್ರಿ
03-09-2021 – ಹಿಂದಿ