ರಾಜ್ಯ
SSLC ಪರೀಕ್ಷೆ ಫಲಿತಾಂಶ ಆಗಸ್ಟ್ 10 ಕ್ಕೆ ಪ್ರಕಟ !

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಎರಡು ದಿನ ಮಾತ್ರ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿದೆ. ಆಗಸ್ಟ್ 10 ಕ್ಕೆ ಎಸ್‌ಎಸ್‌ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಬಾರಿಯ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಕೇವಲ ಬಹು ಆಯ್ಕೆ ಮಾದರಿ ಉತ್ತರಗಳಲ್ಲಿ ಸರಿ ಉತ್ತರಗಳನ್ನು ಓಎಂಆರ್ ಶೀಟ್ ನಲ್ಲಿ ಗುರುತಿಸಬೇಕಷ್ಟೇ. ಹಾಗಾಗಿ ಮೌಲ್ಯಮಾಪನಕ್ಕೆ ಹೆಚ್ಚಿನ ಕಾಲಾವಕಾಶ ಬೇಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಆ.10ಕ್ಕೆ ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.