
ಬೀಜಿಂಗ್(ಚೀನಾ): ಭಾರೀ ಮಳೆಯಿಂದಾಗಿ ಚೀನಾದ ಹಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಮೆಟ್ರೋ ಸುರಂಗಕ್ಕೆ ನೀರು ನುಗ್ಗಿ ೧೨ ಮಂದಿ ಮೃತಪಟ್ಟಿದ್ದಾರೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರೈಲಿನಲ್ಲಿದ್ದ ಪ್ರಯಾಣಿಕರು ತಮ್ಮನ್ನು ರಕ್ಷಿಸುವಂತೆ ಕೂಗಾಡುತ್ತಿರುವ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಏಕಾಏಕಿ ಮಳೆ ಸುರಿದಿರುವ ಕಾರಣ ಮೆಟ್ರೋ ಸುರಂಗದಲ್ಲಿ ನೀರು ನುಗ್ಗಿದೆ.
ಬೀಜಿಂಗ್ ಹಾಗೂ ಹೆನಾನ್ ಪ್ರಾಂತ್ಯದಲ್ಲಿ ಕೆಲ ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.