ಕರಾವಳಿ
ಅಡ್ಡೂರು ಗ್ರಾಮದ ಬಾವಿಯೊಂದು ಕುಸಿದು ರಸ್ತೆ ಸಂಚಾರ ಸ್ಥಗಿತ!

ಮಂಗಳೂರು : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಅಡ್ಡೂರು ಗ್ರಾಮದ ಆಳಕೆ ಪರಿಸರದ ಮಹಮ್ಮದ್ ಸಾಲಿಯ ರವರ ಮನೆಯ ಬಾವಿ ಕುಸಿದು ಬಿದ್ದು ಒಳ ರಸ್ತೆ ಸ್ಥಗಿತಗೊಂಡಿದೆ.
ಈ ಆಕಸ್ಮಿಕ ಘಟನೆಯಿಂದಾಗಿ ಮನೆಯವರು ತುಂಬಾ ಆರ್ಥಿಕ ನಷ್ಟ ಅನುಭವಿಸಿದ್ದಾರೆ ಹಾಗೂ ಆತಂಕದಿಂದ ದಿನ ದೂಡುತ್ತಿದ್ದಾರೆ.
ಘಟನೆಯ ಬಗ್ಗೆ ತಿಳಿದು ಸ್ಥಳಕ್ಕೆ ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಅಶ್ರಫ್, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷೆ ಮತ್ತು ಗ್ರಾಮ ಅಭಿವೃದ್ಧಿ ಅಧಿಕಾರಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.